MAX - ಮ್ಯಾಕ್ಸ್​ನಲ್ಲಿ ಮಾಸ್​ ಸುದೀಪ್​ ; "ಬಾ ಬಾ ಬ್ಲ್ಯಾಕ್​ಶೀಪ್​' ರೈಮ್​ಗೆ ಟೀಸರ್​ನಲ್ಲಿ ಹೊಸ ವ್ಯಾಖ್ಯಾನ

max-2
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ವಿಕ್ರಾಂತ್​ ರೋಣ' ಸಿನಿಮಾ ಬಳಿಕ, ಕಳೆದ ಎರಡು ವರ್ಷಗಳಿಂದ ಕಿಚ್ಚ ಸುದೀಪ್​ ನಾಯಕನಾಗಿ ನಟಿಸಿರುವ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಕಳೆದ 2023ರ ಮಾ. 17ರಂದು ಆರ್​.ಚಂದ್ರು ನಿರ್ದೇಶಿಸಿ ಉಪೇಂದ್ರ ನಾಯಕನಾಗಿದ್ದ "ಕಬ್ಜ' ಸಿನಿಮಾ ರಿಲೀಸ್​ ಆಗಿತ್ತಾದರೂ, ಅದರಲ್ಲಿ ಕಿಚ್ಚ ಸುದೀಪ್​ ಹೀರೋ ಆಗಿರಲಿಲ್ಲ. ಅದರ ನಡುವೆಯೇ "ಬಿಲ್ಲಾ ರಂಗಾ ಬಾಷಾ', "ಕಬ್ಜಾ 2', ಕಿಚ್ಚ ಸುದೀಪ್​ ನಿರ್ದೇಶಿಸಿ, ನಟಿಸಲಿರುವ ಒಂದು ಸಿನಿಮಾ, ತಮಿಳು ನಿರ್ದೇಶಕ ಚೇರನ್​ ಜತೆ ಇನ್ನೊಂದು ಚಿತ್ರ ಅಂತ ಹೊಸ ಸಿನಿಮಾಗಳು ಘೋಷಣೆಯಾಗಿದ್ದವು. ಆದರೆ, ಅವುಗಳಲ್ಲಿ ಮೊದಲು "ಮ್ಯಾಕ್ಸ್​' ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇತ್ತು.

ಹೀಗಾಗಿಯೇ ಅಭಿಮಾನಿಗಳು "ಮ್ಯಾಕ್ಸ್​' ಬಗ್ಗೆ ಅಪ್​ಡೇಟ್​ ಕೇಳುತ್ತಲೇ ಇದ್ದರು. ಇದೀಗ ಕಿಚ್ಚ ಸುದೀಪ್​ "ಮ್ಯಾಕ್ಸ್​'ನ ಮಾಸ್​ ಟೀಸರ್​ ಮೂಲಕ ಅಭಿಮಾನಿಗಳಿಗೆ ಉತ್ತರ ನೀಡಿದ್ದಾರೆ. ನಿರೀೆಯಂತೆಯೇ ಈ ಟೀಸರ್​ನಲ್ಲಿ ಕಿಚ್ಚ ಸುದೀಪ್​ ಮಾಸ್​ ಅವತಾರದಲ್ಲಿ ಮಿಂಚಿದ್ದು, ಭರ್ಜರಿ ಡೈಲಾಗ್​ ಮತ್ತು ಆ್ಯಕ್ಷನ್​ ಮೂಲಕ ಸದ್ದು ಮಾಡುತ್ತಿದ್ದಾರೆ. ಟೀಸರ್​ನಲ್ಲಿ ಇಂಗ್ಲೀಷ್​ ರೈಮ್​ "ಬಾ ಬಾ ಬ್ಲ್ಯಾಕ್​ಶೀಪ್​'ಗೆ ಹೊಸ ವ್ಯಾಖ್ಯಾನ ನೀಡಲಾಗಿದ್ದು, ಅದು ಕಿಚ್ಚ ಸುದೀಪ್​ ಕಂಠದಲ್ಲಿ, ಅಜನೀಷ್​ ಲೋಕನಾಥ್​ ಹಿನ್ನೆಲೆ ಸಂಗೀತದಲ್ಲಿ ಮೂಡಿಬಂದಿರುವುದು ಈ ಝಲಕ್​ನ ಕೇಂದ್ರಬಿಂದುವಾಗಿದೆ.

ವಿಜಯ್​ ಕಾರ್ತಿಕೇಯ ನಿರ್ದೇಶಿಸುತ್ತಿರುವ "ಮ್ಯಾಕ್ಸ್​' ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರಲಿದೆ. ಇದೊಂದು ಆ್ಯಕ್ಷನ್​ ಥ್ರಿಲ್ಲರ್​ ಜಾನರ್​ ಚಿತ್ರವಾಗಿದ್ದು ಕಿಚ್ಚ ಸುದೀಪ್​ ಜತೆ ವರಲಕ್ಷಿ$್ಮ ಶರತ್​ಕುಮಾರ್​, ಸಂಯುಕ್ತ ಹೊರನಾಡು, ಪ್ರಮೋದ್​ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಅಜನೀಷ್​ ಲೋಕನಾಥ್​ ಸಂಗೀತ, ಶೇಖರ್​ ಚಂದ್ರ ಛಾಯಾಗ್ರಹಣ, ಗಣೇಶ್​ ಬಾಬು ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net