ಟೀಕೆಗೆ ಗುರಿಯಾಯ್ತು ಕಿಯಾರ ಅಡ್ವಾಣಿ ಫೋಟೋ: ಇದಕ್ಕೆ ಕಾರಣ ಟಾಪ್​ಲೆಸ್ ಅಲ್ಲವೇ ಅಲ್ಲ!

Kiyara Advani
Published on

ಮುಂಬೈ: ಬಾಲಿವುಡ್​ ಸೆಲಿಬ್ರೆಟಿ ಫೋಟೋಗ್ರಾಫರ್​ ಡಬ್ಬೂ ರಾಟ್ನಾನಿ ತಮ್ಮ ವಾರ್ಷಿಕ ಕ್ಯಾಲೆಂಡರ್​ ಅನ್ನು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದರು. ತಮ್ಮ ಕ್ಯಾಲೆಂಡರ್​ಗಾಗಿ ಸೆರೆಹಿಡಿದಿರುವ ನಟಿ ಕಿಯಾರಾ ಅಡ್ವಾಣಿ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಫೋಟೋ ಟೀಕೆಗೆ ಒಳಗಾಗಲು ಟಾಪ್​ಲೆಸ್​ ಮಾತ್ರ ಕಾರಣವಲ್ಲ. ಬದಲಾಗಿ ಫೋಟೋ ಕುರಿತಾದ ಕೃತಿಚೌರ್ಯ ಆರೋಪ ಕೂಡ ಹೌದು. ಅಂತಾರಾಷ್ಟ್ರೀಯ ಫೋಟೋಗ್ರಾಫರ್​ ಮರಿಯಾ ಬಾರ್ಷ್​ ಫೋಟೋಶೂಟ್​ ಅನ್ನು ಯಥಾವತ್ತಾಗಿ ಡಬ್ಬೂ ರಾಟ್ನಾನಿ ನಕಲು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.

ಕ್ಯಾಲೆಂಡರ್​ ಫೋಟೋದಲ್ಲಿ ನಟಿ ಕಿಯಾರ ಅಡ್ವಾಣಿ ಟಾಪ್​​ಲೆಸ್​ ಆಗಿ ದೊಡ್ಡ ಎಲೆಯ ಮರೆಯಲ್ಲಿ ನಿಂತು ಮಾದಕವಾಗಿ ಕ್ಯಾಮರಾಗೆ ಪೋಸ್​​ ನೀಡಿದ್ದಾರೆ. ಆದರೆ, ಇದೇ ಹೋಲಿಕೆ ಈ ಮೊದಲೇ ಮರಿಯಾ ಬಾರ್ಷ್ ಮಾಡಿರುವ ಫೋಟೋಶೂಟ್​ನಲ್ಲಿದೆ.

ಹೀಗಾಗಿ ಎರಡು ಫೋಟೋಗಳನ್ನು ಒಟ್ಟಿಗೆ ಸೇರಿಸಿ ನೆಟ್ಟಿಗರು ಡಬ್ಬೂ ರಾಟ್ನಾನಿ ವಿರುದ್ಧ ಕೃತಿಚೌರ್ಯ ಆರೋಪ ಮಾಡಿದ್ದಾರೆ. ಡಬ್ಬೂ ರಾಟ್ನಾನಿ ಅವರು ಮರಿಯಾ ಅವರ ಐಡಿಯಾವನ್ನು ಕದ್ದಿದ್ದಾರೆ ಎಂದು ಕಿಡಿಕಾರಿದ್ದಾರೆ. ವಿಶೇಷವೆಂದರೆ ಮರಿಯಾ ಕೂಡ ಫೋಟೋವನ್ನು ಪೋಸ್ಟ್​ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

ಭೂಮಿ ಪಡ್ನೇಕರ್​, ಸನ್ನಿ ಲಿಯೋನ್​, ವಿದ್ಯಾ ಬಾಲನ್​, ವಿಕ್ಕಿ ಕುಶಾಲ್​, ಅನನ್ಯ ಪಾಂಡೆ ಸೇರಿದಂತೆ ಮತ್ತಿತರರು ಡಬ್ಬೂ ರಾಟ್ನಾನಿ ಅವರ ಕ್ಯಾಲೆಂಡರ್​ಗೆ ಫೋಸ್​ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net