ನಟಿ ಬ್ಯಾಕ್ ಲೆಸ್ ಸಿಲ್ವರ್ ಗೌನ್ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಮಿಂಚುತ್ತಿರುವ ಕಾರಣ, ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಅಂದಹಾಗೆ, ಕಿಯಾರಾ ಅವರು ಈ ಅವತಾರ ತಾಳಿರುವುದು ‘ಬಜಾರ್' ಎಂಬ ಮ್ಯಾಗಜೀನ್ ಒಂದರ ಕವರ್ ಫೋಟೋಶೂಟ್ಗೆ. ನಟಿಯ ಈ ಹಾಟ್ ಲುಕ್ ಕಂಡು ಕೇವಲ ಅಭಿಮಾನಿಗಳು ಅಲ್ಲದೇ ಬೇರೆ ಬೇರೆ ಸೆಲೆಬ್ರಿಟಿಗಳು ಕೂಡಾ ಮಂತ್ರಮುಗ್ಥರಾಗಿದ್ದಾರೆ. ಈ ವಿಡಿಯೋ ಮೇಲೆ ಬರೋಬ್ಬರಿ 1.6 ಮಿಲಿಯನ್ ಲೈಕ್ಸ್ಗಳಿದ್ದು, ಮಿಲಿಯನ್ ಗಟ್ಟಲೇ ವೀಕ್ಷಣೆಗಳು ಇವೆ. ಇನ್ನು, 6000ಕ್ಕೂ ಹೆಚ್ಚು ಕಾಮೆಂಟ್ಗಳು ಬಂದಿವೆ.