'ಪೊಗರು' ಚಿತ್ರದ ಖರಾಬು ಹಾಡು ಸೃಷ್ಟಿಸಿತೊಂದು ಹೊಸ ದಾಖಲೆ

ElOgNEIUUAEw7eK
Published on

ಬೆಂಗಳೂರು: ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಪೊಗರು ಸಿನಿಮಾ ಸದ್ಯ ಕನ್ನಡದ ಬಹುನಿರೀಕ್ಷಿತ ಸಿನಿಮಾ. ಈಗಾಗಲೇ ಶೂಟಿಂಗ್​ ಮುಗಿಸಿಕೊಂಡಿರುವ ಚಿತ್ರತಂಡ, ಬಿಡುಗಡೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಡು ಪೋಸ್ಟರ್ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿರುವ ಈ ಸಿನಿಮಾ ಇದೀಗ ಮತ್ತೊಂದು ಹೊಸ ದಾಖಲೆ ಬರೆದಿದೆ.

ಹೌದು, ಯೂಟ್ಯೂಬ್​ನಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ಕನ್ನಡದ ಹಾಡುಗಳ ಸಾಲಿನಲ್ಲಿ ಪೊಗರು ಚಿತ್ರದ ಖರಾಬು ಇದೀಗ ಮೊದಲ ಸ್ಥಾನವನ್ನು ಅಲಂಕರಿಸಿದೆ. ಅಂದರೆ, ಏ. 2ರಂದು ಆನಂದ್​ ಆಡಿಯೋದಲ್ಲಿ ಬಿಡುಗಡೆಯಾಗಿದ್ದ ಈ ಹಾಡನ್ನು ಇಲ್ಲಿಯವರೆಗೂ 151 ಮಿಲಿಯನ್​​ಗೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ. ಕನ್ನಡದಲ್ಲಿ ಈ ಮಟ್ಟದ ವೀಕ್ಷಣೆ ಬೇರಾವ ಹಾಡಿಗೂ ಸಿಕ್ಕಿಲ್ಲ ಎಂಬುದು ಇಲ್ಲಿ ವಿಶೇಷ.

ಈ ಮೊದಲು ಶರಣ್​ ಅಭಿನಯದ ರ್ಯಾಂಬೊ 2 ಚಿತ್ರದ ಚುಟು ಚುಟು ಹಾಡು 124 ಮಿಲಿಯನ್​ ವೀಕ್ಷಣೆ ಕಂಡಿತ್ತು. ಈಗ 15 ಕೋಟಿ ಬಾರಿ ವೀಕ್ಷಣೆ, 10 ಲಕ್ಷ ಲೈಕ್ಸ್ ಗಳನ್ನು ಪೊಗರು ಹಾಡು ಪಡೆದುಕೊಂಡಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಈ ಮಟ್ಟಿಗಿನ ಹವಾ ಸೃಷ್ಟಿಯಾಗಿರುವುದು ಚಿತ್ರತಂಡಕ್ಕೂ ಸಂತಸವನ್ನುಂಟು ಮಾಡಿದೆ.

ಅಂದಹಾಗೆ, ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ನಂದಕಿಶೋರ್ ನಿರ್ದೇಶನದ ಈ ಚಿತ್ರವನ್ನು ಬಿ.ಕೆ ಗಂಗಾಧರ್​ ನಿರ್ಮಾಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net