

ಬೆಂಗಳೂರು: ‘ರಾಕಿಂಗ್ ಸ್ಟಾರ್’ ಯಶ್ ಅವರ ಹುಟ್ಟುಹಬ್ಬದ ನಿಮಿತ್ತ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಟೀಸರ್ ಗುರುವಾರ ರಾತ್ರಿ 9.29ಕ್ಕೆ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಆಗಿದೆ. ಹಾಗೆ ರಿಲೀಸ್ ಆದ ಟೀಸರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಇದೀಗ 13 ಕೋಟಿ (130 ಮಿಲಿಯನ್) ವೀಕ್ಷಣೆಯ ಸಮೀಪಕ್ಕೆ ಬಂದು ನಿಂತಿದೆ ಟ್ರೇಲರ್.
ಸದ್ಯಕ್ಕೆ ಇದು ವಿಶ್ವದಲ್ಲಿ ಬೇರಾವ ಸಿನಿಮಾ ಮಾಡದ ಸಾಧನೆಯನ್ನು ಕನ್ನಡದ ‘ಕೆಜಿಎಫ್’ ಸಿನಿಮಾ ಮಾಡಿದೆ. ಈ ಮೂಲಕ ಘಟಾನುಘಟಿ ಹಾಲಿವುಡ್ ಸಿನಿಮಾಗಳಿಗೂ ಸ್ಯಾಂಡಲ್ವುಡ್ ಕೆಜಿಎಫ್ ಸೆಡ್ಡು ಹೊಡೆದಿದೆ. ಕೇವಲ 24 ಗಂಟೆಯಲ್ಲಿ 7.8 ಕೋಟಿ (78 ಮಿಲಿಯನ್) ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿದ್ದ ಟೀಸರ್, ಇದೀಗ 13 ಕೋಟಿ ವೀಕ್ಷಣೆಯತ್ತ ಮುನ್ನುಗ್ಗುತ್ತಿದೆ.
ಇದನ್ನೂ ಓದಿ: ಅರ್ಧಕ್ಕೆ ಬಂತು ‘ಆ ಒಂದು ಕನಸು’!
ಇನ್ನು ಲೈಕ್ಸ್ ವಿಚಾರದಲ್ಲಿ ಬಂದರೆ, ಇಲ್ಲಿಯವರೆಗೂ 60 ಲಕ್ಷಕ್ಕೂ (6.6 ಮಿಲಿಯನ್) ಅಧಿಕ ಲೈಕ್ಸ್ ಪಡೆದುಕೊಂಡು ಮುನ್ನುಗುತ್ತಿದೆ. ಈ ಮೊದಲು ಸುಶಾಂತ್ ಸಿಂಗ್ ರಜಪೂತ್ ದಿಲ್ಬೇಚಾರ ಸಿನಿಮಾ 24 ಗಂಟೆಯಲ್ಲಿ 60 ಲಕ್ಷ (6 ಮಿಲಿಯನ್) ಲೈಕ್ಸ್ ಗಿಟ್ಟಿಸಿಕೊಂಡು ಮೊದಲ ಸ್ಥಾನದಲ್ಲಿದೆ. ಇದೀಗ ಕೆಜಿಎಫ್ ಅದನ್ನೂ ಮೀರಿ ಮುನ್ನಡೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ.