ಕೆಜಿಎಫ್ ಹಾಡುಗಳ ಕೆಲಸ ಶುರು

page 10 3
Published on

ಬೆಂಗಳೂರು: ಹೇಳಿದ ದಿನದಂದೇ ಬರುವ ನಿಟ್ಟಿನಲ್ಲಿ ಲಾಕ್​ಡೌನ್ ಸಡಿಲಿಕೆ ಬಳಿಕ ಕೆಲಸಕ್ಕೆ ಚಾಲನೆ ನೀಡಿರುವ ‘ಕೆಜಿಎಫ್’ ತಂಡ, ಮೊದಲಾರ್ಥವಾಗಿ ಹಾಡುಗಳ ಕೆಲಸಕ್ಕೆ ಕೈ ಹಾಕಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿಕೊಂಡಿರುವ ಚಿತ್ರ, ಪ್ಯಾಚ್​ವರ್ಕ್ ಕೆಲಸಗಳನ್ನು ಬಾಕಿ ಉಳಿಸಿಕೊಂಡಿದೆ.

ಜತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಮಾಡಿಕೊಳ್ಳುತ್ತಲೇ ಬಂದಿತ್ತು. ಇದೀಗ ಹಾಡುಗಳಿಗೆ ಹೆಚ್ಚು ಸಮಯ ನೀಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು ಸ್ಟುಡಿಯೋದಲ್ಲಿ ಠಿಕಾಣಿ ಹೂಡಿದ್ದಾರೆ. ‘ರಾಕಿಂಗ್ ಸ್ಟಾರ್’ ಯಶ್ ನಾಯಕತ್ವದ ‘ಕೆಜಿಎಫ್’ ಸಿನಿಮಾ ಅಕ್ಟೋಬರ್ 23ಕ್ಕೆ ಬಿಡುಗಡೆಯಾಗಲಿದೆ. ಹಾಗಾಗಿ ಯುದ್ಧೋಪಾದಿಯಲ್ಲಿ ಸಿನಿಮಾ ಕೆಲಸಕ್ಕೆ ಚಾಲನೆ ನೀಡಿದೆ. ಸದ್ಯಕ್ಕೆ ತೆಲುಗಿನಲ್ಲಿ ಹಾಡುಗಳಿಗೆ ಸಾಹಿತ್ಯ ಬರೆಯುವ ಕಾರ್ಯ ಶುರುವಾಗಿದ್ದು, ಅಲ್ಲಿನ ಖ್ಯಾತ ಚಿತ್ರ ಸಾಹಿತಿ, ರಾಮ್ ಜೋಗಯ್ಯ ಶಾಸ್ತ್ರಿ ಭಾವನಾತ್ಮಕ ಹಾಡಿಗೆ ಪದಗಳನ್ನು ಪೋಣಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net