ಇನ್ನೆರಡು ಹೊಸ ದಾಖಲೆಗಳನ್ನು ಮಾಡಿದ 'ಕೆಜಿಎಫ್​ 2' …

KGF 2 A
Published on

ಮುಂಬೈ: ಯಶ್​ ಅಭಿನಯದ 'ಕೆಜಿಎಫ್​ 2' ಚಿತ್ರವು ಬಿಡುಗಡೆಯಾಗಿ ಒಂದಿಷ್ಟು ದಾಖಲೆಗಳನ್ನು ಮಾಡಿದೆ. ಈಗ ವರ್ಷ ಮುಗಿಯುತ್ತಿದ್ದಂತೆಯೇ, ಇನ್ನೆರೆಡು ದಾಖಲೆಗಳು ಚಿತ್ರದ ಪಾಲಾಗಿದೆ.

ಹೌದು, ಬುಕ್​ ಮೈ ಶೋದ 'ಬೆಸ್ಟ್​ ಆಫ್​ 2022' ವರದಿ ಹೊರಬಿದ್ದಿತ್ತು, ಅದರ ಪ್ರಕಾರ, ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಮೊದಲ ದಿನದಂದು ಅತೀ ಹೆಚ್ಚು ಟಿಕೆಟ್​ ಮಾರಾಟವಾದ ಚಿತ್ರ ಎಂಬ ಹೆಗ್ಗಳಿಕೆಗೆ 'ಕೆಜಿಎಫ್​ 2' ಪಾತ್ರವಾಗಿದೆ. ಚಿತ್ರವು ಏ.14ರಂದು ಬಿಡುಗಡೆಯಾಗಿದ್ದು, ಅಂದು ಒಟ್ಟಾರೆ 2.14 ಮಿಲಿಯನ್​ ಟಿಕೆಟ್​ಗಳು ಮಾರಾಟವಾಗಿದ್ದವಂತೆ.

ಇನ್ನು, ಅತೀ ಹೆಚ್ಚು ಅಡ್ವಾನ್ಸ್​ ಬುಕ್ಕಿಂಗ್​ಗಳನ್ನು ಕಂಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ವರ್ಷ 'ಆರ್​ಆರ್​ಆರ್​', 'ಪೊನ್ನಿಯನ್​ ಸೆಲ್ವನ್​ 1', 'ಡಾಕ್ಟರ್​ ಸ್ಟ್ರೇಂಜ್​' ಮುಂತಾದ ಚಿತ್ರಗಳು ಬಿಡುಗಡೆಯಾಗಿದ್ದು, ಈ ಪೈಕಿ ಅತೀ ಹೆಚ್ಚು ಅಡ್ವಾನ್ಸ್​ ಬುಕ್ಕಿಂಗ್​ ಕಂಡ ಚಿತ್ರ 'ಕೆಜಿಎಫ್​ 2' ಆಗಿದೆ ಎಂಬುದು ವಿಶೇಷ. ಹಾಲಿವುಡ್​ ಚಿತ್ರಗಳು ಐಮ್ಯಾಕ್ಸ್​ ಮತ್ತು 4ಡಿಎಕ್ಸ್​ ಫಾರ್ಮಾಟ್​ಗಳಲ್ಲಿ ಹೆಚ್ಚು ಬಿಡುಗಡೆಯಾಗುತ್ತಿರುವಾಗ, ಅಲ್ಲೂ 'ಕೆಜಿಎಫ್​ 2' ಚಿತ್ರವು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆಯಾಗಿರುವುದು ವಿಶೇಷ.

'ಕೆಜಿಎಫ್​ 2' ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಯಶ್​, ಸಂಜಯ್​ ದತ್​, ರವೀನಾ ಟಂಡನ್​, ಶ್ರೀನಿಧಿ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲಂಸ್​ನ ವಿಜಯ್​ ಕಿರಗಂದೂರು ನಿಮಿರ್ಸಿರುವ ಈ ಚಿತ್ರವನ್ನು ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net