ಕೀರ್ತಿ ಸುರೇಶ್​ ಈಗ ನಿರ್ಮಾಪಕಿ

keerthy suresh
Published on

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವ ನಟಿಯರ ಸಾಲಿನಲ್ಲಿ ಕೀರ್ತಿ ಸುರೇಶ್ ಮೊದಲಿಗರಾಗಿ ನಿಲ್ಲುತ್ತಾರೆ. ನಟಿಸಿದ ಬಹುತೇಕ ಸಿನಿಮಾಗಳೆಲ್ಲ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡುವುದರ ಜತೆಗೆ ಮೆಚ್ಚುಗೆಯನ್ನೂ ಪಡೆದುಕೊಂಡಿವೆ. ಈಗ ಇದೆಲ್ಲದರ ಜತೆಗೆ ಇನ್ನೊಂದು ಸಾಹಸಕ್ಕೆ ಕೀರ್ತಿ ಕೈ ಹಾಕಿದ್ದಾರೆ.

ಸದ್ಯದಲ್ಲೇ ಅವರು ನಿರ್ವಪಕಿಯಾಗಿ ಭಡ್ತಿ ಪಡೆದುಕೊಳ್ಳಲಿದ್ದಾರೆ. ಈಗಾಗಲೇ ಸಾಕಷ್ಟು ನಟಿಯರು ನಿರ್ವಪಕಿಯಾಗಿ ತೊಡಗಿಸಿಕೊಂಡು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ತಮನ್ನಾ, ನಯನತಾರಾ, ಸಮಂತಾ, ಕಾಜಲ್ ಅಗರ್​ವಾಲ್ ಸೇರಿ ಹಲವು ನಟಿಯರು ನಿರ್ವಪಕಿಯಾಗಿದ್ದಾರೆ. ಈಗ ಕೀರ್ತಿ ಸುರೇಶ್ ಸಹ ಆ ಜವಾಬ್ದಾರಿ ಹೊತ್ತಿದ್ದು, ಮೊದಲಾರ್ಥದಲ್ಲಿ ವೆಬ್​ಸಿರೀಸ್​ಗೆ ಬಂಡವಾಳ ಹೂಡಲಿದ್ದಾರೆ ಎನ್ನಲಾಗುತ್ತಿದೆ.

ತಮಿಳಿನಲ್ಲಿ ಸಿದ್ಧವಾಗಲಿರುವ ವೆಬ್​ಸಿರೀಸ್​ವೊಂದರ ಕಥೆ ಕೇಳಿರುವ ಅವರು, ನಿರ್ವಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ, ವೆಬ್ ಸಿರೀಸ್ ಎಂಥದ್ದು? ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸದ್ಯ ‘ಮಿಸ್ ಇಂಡಿಯಾ’, ‘ಗುಡ್ ಲಕ್ ಸಾಕ್ಷಿ’, ‘ಅಣ್ಣಾಟೆ’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net