ಫೋರ್ಬ್ಸ್ ಇಂಡಿಯಾ 2021ರಲ್ಲಿ ಕೀರ್ತಿ ಸುರೇಶ್ ಪತಾಕೆ

Keerthi Suresh
Published on

ಸಿನಿಮಾ ಮೂಲಕ ಈಗಾಗಲೇ ಖ್ಯಾತಿಯ ಉತ್ತುಂಗದಲ್ಲಿರುವ ಟಾಲಿವುಡ್ ನಟಿ ಕೀರ್ತಿ ಸುರೇಶ್ ಮುಡಿಗೆ ಮತ್ತೊಂದು ಕಿರೀಟ ದಕ್ಕಿದೆ. ಫೋರ್ಬ್ಸ್ ಇಂಡಿಯಾ 2021 ಬಿಡುಗಡೆ ಮಾಡಿರುವ 30 ವರ್ಷದೊಳಗಿನ 30 ಮಹಿಳೆಯರ ಪಟ್ಟಿಯಲ್ಲಿ 28 ವರ್ಷದ ಕೀರ್ತಿ ಸುರೇಶ್ ಸ್ಥಾನ ಪಡೆದಿದ್ದಾರೆ. ಚೆನ್ನೈ ಮೂಲದ ಕೀರ್ತಿ, ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡು ಅದಾದ ಬಳಿಕ ತೆಲುಗು, ತಮಿಳು ಮತ್ತು ಹಿಂದಿಯಲ್ಲಿಯೂ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ.

‘ಮಹಾನಟಿ’ ಸಿನಿಮಾದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನೂ ಕೀರ್ತಿ ಪಡೆದುಕೊಂಡಿದ್ದರು. ಇದೀಗ 2021ನೇ ಸಾಲಿನ ಫೋರ್ಬ್ಸ್ ಇಂಡಿಯಾ ಮಹಿಳಾ ವಿಭಾಗದ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ವಿಚಾರವನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ‘30 ವರ್ಷದ ಒಳಗಿನ 30 ಮಹಿಳೆಯರಲ್ಲಿ ನಾನೂ ಒಬ್ಬಳಾಗಿ ಗುರುತಿಸಿ ಗೌರವಿಸಿ ದ್ದಕ್ಕೆ ಫೋರ್ಬ್ಸ್​ಗೆ ಧನ್ಯವಾದಗಳು’ ಎಂದಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net