ನ್ಯೂಯಾರ್ಕ್​ನಲ್ಲಿರುವ ಪ್ರಿಯಾಂಕಾ ಛೋಪ್ರಾ ಹೋಟೆಲ್​ಗೆ ಭೇಟಿ ನೀಡಿದ ಕತ್ರಿನಾ-ವಿಕ್ಕಿ ​​ದಂಪತಿ: ಇಬ್ಬರು ನಟಿಯರು ಸಂತಸ ಹಂಚಿಕೊಂಡಿದ್ದು ಹೀಗೆ

Katrina-Vicky
Published on

ನ್ಯೂಯಾರ್ಕ್​: ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಕತ್ರಿನಾ ಕೈಫ್​​ ಹಾಗೂ ವಿಕ್ಕಿ ಕೌಶಲ್​ ಸದ್ಯ ನ್ಯೂಯಾರ್ಕ್​ನಲ್ಲಿ ಸಮಯ ಕಳೆಯುತ್ತಿದ್ದಾರೆ.

ಮದುವೆಯಾಗಿ ಹನಿಮೂನಿಗೂ ತೆರಳದೇ ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದ ಇಬ್ಬರು ಈಗ ಸ್ವಲ್ಪ ವಿರಾಮ ತೆಗೆದುಕೊಂಡು ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಸದ್ಯ ನ್ಯೂಯಾರ್ಕ್​ನಲ್ಲಿರುವ ಈ ಜೋಡಿ, ಪ್ರಿಯಾಂಕಾ ಛೋಪ್ರಾ ಅವರ ಒಡೆತನದ ಭಾರತೀಯ ಶೈಲಿಯ ಸೂನಾ ಹೋಟೆಲ್​ಗೆ ಭೇಟಿ ನೀಡಿ, ಭಾರತೀಯ ಖಾದ್ಯವನ್ನು ಸವಿದಿದ್ದಾರೆ.

ಇಲ್ಲಿ ಭೇಟಿ ನೀಡಿದ ವೇಳೆ, ಇಲ್ಲಿನ ಬಾಣಸಿಗನ ಜತೆ ತೆಗೆಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕತ್ರಿನಾ-ವಿಕ್ಕಿ ಕೌಶಲ್​ ತನ್ನ ಹೋಟೆಲ್​ಗೆ ಭೇಟಿ ನೀಡಿರುವುದಕ್ಕೆ ಪ್ರಿಯಾಂಕಾ ಛೋಪ್ರಾ ಕೂಡ ಸಂತಸ ವ್ಯಕ್ತಪಡಿಸಿ, ಇಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ಇನ್ಸ್​ಸ್ಟಾಗ್ರಾಂನಲ್ಲಿ ಕತ್ರಿನಾ ಪೋಸ್ಟ್​ ಹಾಕಿಕೊಂಡಿದ್ದು, ಮನೆಯಿಂದ ದೂರ ಮನೆಗೆ ಬಂದಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರಿಯಾಂಕಾ ಕೂಡ ಪ್ರತಿಕ್ರಿಯಿಸಿ ನೀವು ನಮ್ಮ ಹೋಟೆಲ್​ಗೆ ಭೇಟಿ ನೀಡಿದ್ದು, ತುಂಬಾ ಖುಷಿಯಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net