ಪತಿಯ ಮೇಲೆ 45 ನಿಮಿಷ ಕೂಗಾಡುತ್ತಾರಂತೆ ಕತ್ರಿನಾ! ಕಾರಣವೇನು ಗೊತ್ತಾ?

Katrina (1)
Published on

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ, ಬಾಲಿವುಡ್ ನಟಿ ಕತ್ರಿನಾ ಪತಿ ವಿಕ್ಕಿ ಕೌಶಲ್ ಜತೆ ಜಗಳವಾಡದಿದ್ದರೂ, ಬೇರೆ ಕೋಪವನ್ನು ಪತಿಯ ಮೇಲೆ ರೇಗಿ ತೀರಿಸಿಕೊಳ್ಳುತ್ತಾರಂತೆ.

ಈ ಬಗ್ಗೆ ಇತ್ತೀಚೆಗಷ್ಟೆ ಅವರು, ‘ನನಗೆ ಹೊರಗೆ ಎಲ್ಲಿಯೇ ಕೋಪ ಬಂದರೂ ತೋರಿಸಿಕೊಳ್ಳುವುದಿಲ್ಲ. ಬದಲಾಗಿ ಮನೆಗೆ ಹೋಗಿ, 45 ನಿಮಿಷಗಳ ಕಾಲ ವಿಕ್ಕಿ ಮುಂದೆ ಕೂಗಾಡುತ್ತೇನೆ. ಬಹುತೇಕ ಇಂಗ್ಲೀಷ್‌ನಲ್ಲೇ ವೇಗವಾಗಿ ರೇಗುವುದರಿಂದ ಕೆಲವೊಮ್ಮೆ ವಿಕ್ಕಿಗೆ ನನ್ನ ಭಾಷೆ ಅರ್ಥವಾಗುವುದಿಲ್ಲ. ಆಗ ಅವರು, ನನ್ನನ್ನು ತಡೆದು ಅರ್ಥವಾಗಲಿಲ್ಲ ಎನ್ನುತ್ತಾರೆ. ನಂತರ ಮತ್ತೆ ಅವರಿಗೆ ಅರ್ಥವಾಗುವಂತೆ ಬೈಯುತ್ತೇನೆ. ನನ್ನ ಕೋಪ ಕಡಿಮೆಯಾಗುವವರೆಗೂ ವಿಕ್ಕಿ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ನನಗೆ ಸಮಾಧಾನವಾದ ನಂತರ ಇಬ್ಬರೂ ನಡೆದ ಘಟನೆಯನ್ನು ಮರೆಯುತ್ತೇವೆ. ಹೀಗಾಗಿ ಹೊರಗೆ ಬಂದಾಗ ನಾನು ತುಂಬ ಶಾಂತವಾಗಿರುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಎರಡು ವರ್ಷ ಡೇಟ್ ಮಾಡಿ 2021ರ ಡಿ. 9ರಂದು ಕತ್ರಿನಾ ಮತ್ತು ವಿಕ್ಕಿ ಮದುವೆಯಾಗಿದ್ದರು. ಸದ್ಯ ಕತ್ರಿನಾ, ‘ಮೆರ‌್ರಿ ಕ್ರಿಸ್ಮಸ್’ ರಿಲೀಸ್‌ಗೆ ಎದುರು ನೋಡುತ್ತಿದ್ದು, ವಿಕ್ಕಿ ‘ಛಾವ’ ಮತ್ತು ‘ಮೇರೆ ಮೆಹಬೂಬ್ ಮೇರೆ ಸನಮ್’ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net