

ಕಪೂರ್ ಹಾಗೂ ಶಾಹಿದ್ ಕಪೂರ್ ಪರಸ್ಪರ ಅಪ್ಪಿಕೊಂಡ ವಿಡಿಯೋ ವೈರಲ್.
ಗೀತ್ ಮತ್ತು ಆದಿತ್ಯ ಜೋಡಿಯನ್ನು ಮತ್ತೆ ಸಿನಿಮಾದಲ್ಲಿ ನೋಡ್ಬೇಕು ಎಂದ ಫ್ಯಾನ್ಸ್.
ಕರೀನಾ ಕಪೂರ್ ಕಪ್ಪು ಬಣ್ಣದ ಲೆದರ್ ಟಾಪ್ ಮತ್ತು ಸ್ಕರ್ಟ್ನಲ್ಲಿ ಮಿಂಚಿದ ಕರೀನಾ.
Kareena Kapoor Khan, Shahid Kapoor: 'ಜಬ್ ವಿ ಮೆಟ್' ಸಿನಿಮಾ ಮೂಲಕ ಡೇಟಿಂಗ್ನಲ್ಲಿದ್ದ ಕರೀನಾ ಮತ್ತು ಶಾಹಿದ್ ಕಪೂರ್ ಸದ್ಯ ತಮ್ಮದೇ ಆದ ಪ್ರತ್ಯೇಕ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಆದರೆ, ಅವರಿಬ್ಬರ ಮೇಲಿನ ಕ್ರೇಜ್ ಮಾತ್ರ ಫ್ಯಾನ್ಸ್ಗೆ ಕಡಿಮೆಯಾಗಿಲ್ಲ. ಸದ್ಯ ಗುರುವಾರ ಮಧ್ಯಾಹ್ನ ನಡೆದ ಐಫಾ 2027ರ ಪತ್ರಿಕಾಗೋಷ್ಠಿಯಲ್ಲಿ ಇಬ್ಬರು ಪರಸ್ಪರ ಹಗ್ ಕೊಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಕ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶಾಹಿದ್ ಮತ್ತು ಕರೀನಾ ಅವರು ಅಪ್ಪಿಕೊಂಡಿರುವ ವಿಡಿಯೋ ವೈರಲ್ ಆಗುತ್ತಲೇ ಕಾಮೆಂಟ್ಗಳ ಸುರಿಮಳೆ ಸುರಿದಿದೆ. ಜಬ್ ವಿ ಮೆಟ್ ಸಿನಿಮಾದ ಗೀತ್ ಮತ್ತು ಆದಿತ್ಯ ಜೋಡಿಯನ್ನು ಮತ್ತೆ ನೋಡಿದಂತಾಯ್ತು ಅದೇ ಅನೋನ್ಯತೆ ಇನ್ನೂ ಇದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಜಬ್ ವಿ ಮೆಟ್ 2 ಸಿನಿಮಾ ಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ.
ಐಫಾ 2027ರ ಪತ್ರಿಕಾಗೋಷ್ಠಿಗೆ ಕರೀನಾ ಕಪೂರ್ ಕಪ್ಪು ಬಣ್ಣದ ಲೆದರ್ ಟಾಪ್ ಮತ್ತು ಸ್ಕರ್ಟ್ ಧರಿಸಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆದರೆ, ಶಾಹಿದ್ ಕಪೂರ್ ಬಿಳಿ ಬಣ್ಣದ ಸೂಟ್ನಲ್ಲಿ ಕಂಗೊಳಿಸಿದರು. ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್, ವರುಣ್ ಧವನ್, ಪಂಕಜ್ ರಾಜ್ ತ್ರಿಪಾಠಿ ಮತ್ತಿತ್ತರರು ಇದ್ದರು.
ಶಾಹಿದ್-ಕಪೂರ್ ಮತ್ತು ಕರೀನಾ ಕಪೂರ್ ಖಾನ್ ಜಬ್ ವಿ ಮೆಟ್ ಸಿನಿಮಾ ಮೂಲಕ ಪರಿಚಿತರಾದರು. ಸಿನಿಮಾದಲ್ಲಿರುವಂತೆ ಈ ಜೋಡಿಯು ಡೇಟಿಂಗ್ ಆರಂಭಿಸಿದ್ದರು.ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. 2004 ರಿಂದ 2007ರವರೆಗೆ ಪ್ರೀತಿಯಲ್ಲಿದ್ದರು. ಆದರೆ, ಇನ್ನೇನು ಮದುವೆಯಾಗುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್ಗೆ 2007ರಲ್ಲಿ ಅವರಿಬ್ಬರು ಮಧ್ಯೆ ಬ್ರೇಕಪ್ ಆದ ಸುದ್ದಿ ಅಘಾತವನ್ನು ತಂದಿತ್ತು.
ಸದ್ಯ ಇಬ್ಬರು ಕಾರ್ಯಕ್ರಮವೊಂದರಲ್ಲಿ ಹಗ್ ಮಾಡಿಕೊಂಡಿರುವ ವಿಡಿಯೋ ಆಗುತ್ತಿದ್ದಂತೆ ಅಭಿಮಾನಿಗಳು ಭಾವಕರಾಗಿದ್ದು, ಇವರನ್ನು ಮತ್ತೆ ಒಟ್ಟಿಗೆ ಸಿಲ್ವರ್ ಸ್ಕ್ರೀನ್ನಲ್ಲಿ ನೋಡಲು ಬಯಸುತ್ತಿದ್ದಾರೆ. 'ಇದನ್ನು ನೋಡಿ ನನಗೆ ಯಾಕೆ ಕಣ್ಣೀರು ಬರುತ್ತಿದೆ. ಖುಷಿಯಾಗುತ್ತಿದೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ನೆಟ್ಟಿಗ 'ಹೌದು ಇವರ ಜೋಡಿ ಭಾವನಾತ್ಮಕರಾಗುವಂತೆ ಮಾಡಿ ಬಿಡುತ್ತದೆ 'ಎಂದಿದ್ದಾರೆ. ಅನೇಕರು ಇವರನ್ನು ಒಟ್ಟಿಗೆ ಒಂದು ಸಿನಿಮಾದಲ್ಲಿ ನೋಡುವಾಸೆಯನ್ನು ವ್ಯಕ್ತಪಡಿಸಿದ್ದು, "ಗೀತ್ ಮತ್ತು ಆದಿತ್ಯ" ಎಂದು ಕಾಮೆಂಟ್ ಮಾಡಿದ್ದಾರೆ.
ಸದ್ಯ ಕರೀನಾ ಕಪೂರ್ ಖಾನ್ ಅವರು ಸೈಫ್ ಅಲಿ ಖಾನ್ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಮತ್ತೊಂದೆಡೆ ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜ್ಪೂತ್ ಜೋಡಿ ಕಪಲ್ ಗೋಲ್ಸ್ ನೀಡುತ್ತಿದ್ದಾರೆ. ಇತ್ತೀಚೆಗೆ ಮೀರಾ ರಜ್ಪೂತ್ ಅವರು ಕರೀನಾ ಅವರ 'ವಾಟ್ ವುಮೆನ್ ವೆಂಟ್' ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದು ಎಲ್ಲರಿಗೂ ಅಚ್ಚರಿ ತಂದಿತ್ತು. ಅಲ್ಲದೆ ಇಬ್ಬರ ಒಡನಾಟದ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು,(ಏಜೆನ್ಸೀಸ್).