

ಬೆಂಗಳೂರು: ಹಾಗೆ ನೋಡಿದರೆ, ಸೋಷಿಯಲ್ ಮೀಡಿಯಾಗೆ ಎಲ್ಲರಿಗಿಂತ ಬಹಳ ತಡವಾಗಿ ಎಂಟ್ರಿ ಕೊಟ್ಟವರೆಂದರೆ ಅದು ಕರೀನಾ ಕಪೂರ್. ಇಷ್ಟು ವರ್ಷಗಳ ಕಾಲ, ಅದರಿಂದ ದೂರವೇ ಇದ್ದ ಕರೀನಾ, ಇನ್ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದು ಕಳೆದ ತಿಂಗಳಷ್ಟೇ. ಅಲ್ಲಿಂದ ಇಲ್ಲಿಯವರೆಗೂ ಕರೀನಾ, ಇನ್ಸ್ಟಾಗ್ರಾಂನಲ್ಲಿ ಅದೆಷ್ಟು ಬಿಜಿಯಾಗಿದ್ದಾರೆಂದರೆ, ಪ್ರತಿದಿನ ತಮ್ಮ ಬಗ್ಗೆ ಒಂದಲ್ಲ ಒಂದು ವಿಷಯ ಮತ್ತು ಫೋಟೋ ಪೋಸ್ಟ್ ಮಾಡುತ್ತಲೇ ಇದ್ದಾರೆ.
ಮಂಗಳವಾರ, ಒಂದು ಫೋಟೋ ಶೇರ್ ಮಾಡಿದ್ದ ಅವರು, ಅದರ ಜತೆಗೆ ‘ವರ್ಕ್ ಫ್ರಮ್ ಹೋಮ್ ದೆ ಸೆಡ್ ...’ ಎಂದು ಬರೆದುಕೊಂಡಿದ್ದರು. ಆದರೆ, ಮನೆಯಿಂದ ಏನು ಕೆಲಸ ಮಾಡುತ್ತಿದ್ದಾರೆಂದು ಬಿಟ್ಟುಕೊಡಲಿಲ್ಲ. ಇನ್ನು ಸೋಮವಾರ, ಮಗ ತೈಮುರ್ ಪಾಸ್ತದಿಂದ ಮಾಡಿದ ಸರವನ್ನು ಹಾಕಿಕೊಂಡಿದ್ದರು. ಅದರ ಹಿಂದಿನ ದಿನ, ಇನ್ಸ್ಟಾಗ್ರಾಂ ಮೂಲಕ ಅರ್ಜುನ್ ಕಪೂರ್ ಅವರ ಕಾಲೆಳೆದಿದ್ದರು. ಹೀಗೆ ಪ್ರತಿದಿನ ಒಂದಲ್ಲಾ ಒಂದು ಪೋಸ್ಟ್ ಹಾಕುವ ಮೂಲಕ ತಾವೂ ಬಿಜಿಯಾಗಿರುವುದರ ಜತೆಗೆ, ಅಭಿಮಾನಿಗಳನ್ನೂ ಬಿಜಿಯಾಗಿಟ್ಟಿದ್ದಾರೆ. ಅಷ್ಟೇ ಅಲ್ಲ, ಪ್ರತಿದಿನ ಹೊಸ ಹೊಸ ಪೋಸ್ಟ್ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ. ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಬರೋದು ಅಂದರೆ ಇದೇನಾ?