ನಾನು ಆಕೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ... ಆಲಿಯಾ ಭಟ್ ಬಗ್ಗೆ ಈ ರೀತಿ ಹೇಳಿದ್ದು ಯಾರು ಗೊತ್ತಾ?

Alia Final
Published on

‘ನಿಜ ಹೇಳಬೇಕೆಂದರೆ, ನಾನು ಆಲಿಯಾಳನ್ನು ಸರಿಯಾಗಿ ಬಳಸಿಕೊಳ್ಳಲೇ ಇಲ್ಲ. ಆಕೆ ಅದ್ಭುತ ಪ್ರತಿಭಾವಂತೆ. ಮುಂದೊಂದು ದಿನ ಆಕೆಗಾಗಿ ಒಂದು ಸಿನಿಮಾ ಮಾಡುತ್ತಾರೆ …’

ಹೀಗೆ ಆಲಿಯಾ ಭಟ್ ಬಗ್ಗೆ ಹೇಳಿದ್ದು ಯಾರು ಗೊತ್ತಾ? ಆಕೆಯ ್ರೆಂಡ್, ಫಿಲಾಸರ್ ಮತ್ತು ಗೈಡ್ ಆದ ಕರಣ್ ಜೋಹಾರ್. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ, ತಾನು ಆಲಿಯಾಳ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಸ್ವತಃ ಕರಣ್ ಜೋಹಾರ್ ಹೇಳಿಕೊಂಡಿದ್ದಾರೆ.

‘ಆಲಿಯಾಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ನಾನೇ ಎಂದು ಎಲ್ಲರಿಗೂ ಗೊತ್ತಿದೆ. ‘ಸ್ಟೂಡೆಂಟ್ ಆ್ ದಿ ಇಯರ್’ ಚಿತ್ರದಲ್ಲಿ ಆಕೆಯ ಮೊದಲ ಚಿತ್ರವಾದರೂ, ಆಕೆಯ ಪ್ರತಿಭೆಯನ್ನು ಬಳಸಿಕೊಳ್ಳಲಾಗಲಿಲ್ಲ. ಆಕೆಯ ಪ್ರತಿಭೆಯನ್ನು ಅದ್ಭುತವಾಗಿ ಬಳಸಿಕೊಂಡಿದ್ದು ‘ಹೈವೇ’ ಚಿತ್ರದಲ್ಲಿ. ‘ಸ್ಟೂಡೆಂಟ್ ಆ್ ದಿ ಇಯರ್’ ಮೂಲಕ ಆಕೆ ಲಾಂಚ್ ಆದರೂ, ಆಕೆಯ ನಿಜವಾದ ಲಾಂಚ್ ಎಂದರೆ ಅದು ‘ಹೈವೇ’. ಆಕೆಯ ಪ್ರತಿಭೆಯನ್ನು ನಿರ್ದೇಶಕ ಇಮ್ತಿಯಾಜ್ ಅಲಿ ಬಳಸಿಕೊಂಡ ರೀತಿ ನಿಜಕ್ಕೂ ಖುಷಿ ಕೊಡುತ್ತದೆ. ಆ ತರಹ ನನ್ನಿಂದ ಸಾಧ್ಯವಾಗಲೇ ಇಲ್ಲ’ ಎಂದು ಒಪ್ಪಿಕೊಂಡಿದ್ದಾರೆ ಕರಣ್ ಜೋಹಾರ್.

ಇನ್ನು ಬಹಳ ದಿನಗಳ ನಂತರ ಆಲಿಯಾ ಅಭಿನಯದಲ್ಲಿ ‘ತಖ್ತ್​’ ಎಂಬ ಸಿನಿಮಾ ಮಾಡುತ್ತಿದ್ದಾರೆ ಕರಣ್. ಆ ಚಿತ್ರದಲ್ಲೂ ಆಲಿಯಾ ಪ್ರತಿಭೆಗೆ ಹೆಚ್ಚು ಅವಕಾಶವಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ‘ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಅನಿಲ್ ಕಪೂರ್, ರಣವೀರ್ ಸಿಂಗ್, ಕರೀನಾ ಕಪೂರ್, ವಿಕ್ಕಿ ಕೌಶಾಲ್, ಜಾಹ್ನವಿ ಕಪೂರ್ … ಹೀಗೆ ಬಹಳ ಕಲಾವಿದರಿದ್ದಾರೆ. ಹಾಗಾಗಿ ಇಲ್ಲಿ ಆಲಿಯಾ ಪ್ರತಿಭೆಯನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಮುಂದೊಂದು ದಿನ, ಆಕೆಯ ಪ್ರತಿಭೆಯನ್ನು ಪರಿಪೂರ್ಣವಾಗಿ ಬಳಸಿಕೊಳ್ಳುವ ಚಿತ್ರವೊಂದನ್ನು ಮಾಡುತ್ತೇನೆ’ ಎನ್ನುತ್ತಾರೆ ಕರಣ್ ಜೋಹಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net