ಧನುಷ್ ನಟನೆಯ 'Kara' ಒಟಿಟಿ ರಿಲೀಸ್​ ದಿನಾಂಕ ಫಿಕ್ಸ್; ಎಂದು, ಎಲ್ಲಿ ವೀಕ್ಷಿಸಬಹುದು?

 Kara OTT Release
Kara OTT Release
Published on

ಪ್ರಮುಖ ಮುಖ್ಯಾಂಶಗಳು

  • ಕಾರಾ ಸಿನಿಮಾ ಓಟಿಟಿಗೆ ಲಗ್ಗೆಯಿಡಲು ದಿನಾಂಕ ಫಿಕ್ಸ್
  • ಮೇ.28ರಂದು ನೆಟ್​​ಫ್ಲಿಕ್ಸ್​ನಲ್ಲಿ ಕಾರಾ ಸಿನಿಮಾ ನೋಡಲು ಲಭ್ಯ
  • ನಟ ಧನುಷ್, ಮಲ್ಲು ಕುಟ್ಟಿ ಮಮಿತಾ ಬೈಜು ಅಭಿನಯದ ಕಾರಾ ಸಿನಿಮಾ
Kara OTT Release: ಕಾಲಿವುಡ್​ ಸ್ಟಾರ್​ ಧನುಷ್, ಮಲ್ಲು ಕುಟ್ಟಿ ಮಮಿತಾ ಬೈಜು ನಟಿಸಿರುವ ಕಾರಾ ಸಿನಿಮಾ ವಿಶ್ವದಾದ್ಯಂತ 52 ಕೋಟಿ ಗಳಿಕೆ ಕಂಡಿದೆ. ವಿಘ್ನೇಶ್​ ರಾಜ್​ ನಿರ್ದೇಶನದ ಈ ಸಿನಿಮಾ ಏಪ್ರಿಲ್​ 30ರಂದು ಥಿಯೇಟರ್​ನಲ್ಲಿ ಬಿಡುಗಡೆಯಾಗಿತ್ತು. ಸದ್ಯ ಒಟಿಟಿ ಪ್ರಿಯರನ್ನು ರಂಜಿಸಲು ಸಜ್ಜಾಗುತ್ತಿದ್ದು, ಎಂದು ಯಾವ ಫ್ಲಾಟ್​ಫಾರ್ಮ್​ನಲ್ಲಿ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಗ್ರಾಮೀಣ ಹಿನ್ನೆಲೆಯ ಆಕ್ಷನ್ ಥ್ರಿಲ್ಲರ್ ಸಿನಿಮಾವಾದ ಕರಾಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಈ ಸಿನಿಮಾವನ್ನು ಒಟಿಟಿ ದೈತ್ಯ ಸಂಸ್ಥೆಯಾದ ನೆಟ್​ಫ್ಲಿಕ್ಸ್​​​ ಕರ ಸಿನಿಮಾವನ್ನು ಡಿಜಿಟಲ್​ ಹಕ್ಕುಗಳ ಒಪ್ಪಂದದೊಂದಿಗೆ ತನ್ನದಾಗಿಸಿಕೊಂಡಿತ್ತು, ಸಿನಿಮಾದ ಥಿಯೇಟ್ರಿಕಲ್ ಪ್ರದರ್ಶನ ಮುಗಿದ ನಂತರ ಇದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಚಿತ್ರತಂಡ ಈ ಮೊದಲೇ ಅಧಿಕೃತವಾಗಿ ಪ್ರಕಟಿಸಿತ್ತು. ಸದ್ಯ ಯಾವ ದಿನ ಪ್ರಸಾರವಾಗಲಿದೆ ಎಂದು ಅಧಿಕೃತ ದಿನಾಂಕ ಹೊರಬಿದ್ದಿದೆ.

ನೆಟ್​ಫ್ಲಿಕ್ಸ್​ನಲ್ಲಿ ಎಂದು ನೋಡಬಹುದು?

ಸಾಮಾನ್ಯವಾಗಿ ಸಿನಿಮಾಗಳು ರಿಲೀಸ್ ಆದ ನಾಲ್ಕು ಅಥವಾ ಐದು ವಾರದ ಬಳಿಕ ಆನ್​ಲೈನ್ ಫ್ಲಾಟ್​ಫಾರ್ಮ್​ನಲ್ಲಿ ನೋಡಲು ಸಿಗುತ್ತದೆ. ಅದರಂತೆ ಕರ ಸಿನಿಮಾವು ಜೂನ್ ಮೊದಲ ವಾರ ಅಥವಾ ಮೇ.28ರಂದು ನೆಟ್​ಫ್ಲಿಕ್ಸ್​ ಫ್ಲಾಟ್​ಫಾರ್ಮ್​ನಲ್ಲಿ ನೋಡಲು ಸಿಗಬಹುದು ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಸಂಸ್ಥೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಕಾರಾ ಸಿನಿಮಾ ಮೂಲತಃ ತಮಿಳು ಭಾಷೆಯದ್ದು. ಆದರೆ, ತಮಿಳಿನಲ್ಲಿ ಮಾತ್ರವಲ್ಲ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಪ್ಯಾನ್​ ಇಂಡಿಯಾ ಭಾಷೆಯಲ್ಲಿ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.

ಕಾರಾ ಸಿನಿಮಾದ ಕತೆಯೇನು

1991ರ ಕೊಲ್ಲಿ ಯುದ್ಧದ ಸಮಯದಲ್ಲಿ ನಡೆಯುವ ಘಟನೆಯಾಗಿದೆ. ಸಣ್ಣ ಕಳ್ಳನಾದ ಧನುಷ್​​ ಪತ್ನಿ ಜೊತೆಗೆ ಜೀವನ ಕಟ್ಟಿಕೊಳ್ಳಲು ಬಯಸಿ ಹೋಟೆಲ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅದರಿಂದ ತೃಪ್ತಿದಾಯಕಜೀವನ ನಡೆಸಲು ಸಾಧ್ಯವಾಗದೆ ತನ್ನ ತಂದೆ ಕಂದಸ್ವಾಮಿ ಬಳಿ ಸಾಲ ಕೇಳಲು ಹೋದಾಗ ಅವರೇ ಇಕ್ಕಟ್ಟಿನಲ್ಲಿರುವುದು ತಿಳಿಯುತ್ತದೆ. ರೈತರಿಗಾಗುತ್ತಿರುವ ಮೋಸವನ್ನು ಅರಿತುಕೊಳ್ಳುವ ಆತ ಮುಂದೇನು ಮಾಡುತ್ತಾನೆ ಅಪರಾಧಕ್ಕಿಳಿಯುವುದು ಹೇಗೆ ಎನ್ನುವುದನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಸಿನಿಮಾದಲ್ಲಿ ಧನುಷ್, ಪ್ರೇಮುಲು ಖ್ಯಾತಿಯ ಮಮಿತಾ ಬೈಜು, ಪ್ರಕಾಶ್ ಕುಮಾರ್​, ಜಯರಾಂ, ಕೆಎಸ್​ ರವಿಕುಮಾರ್, ಕರುಣಾಸ್, ಸೂರಜ್​ ವೆಂಜರಮೂಡು​​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net