ಕಾನೂನು ಅಸ್ತ್ರ ಆಡಿಯೋ ಲಾಂಚ್; ನಾಗರಾಜ ನಿರ್ದೇಶನದ ಚಿತ್ರಕ್ಕೆ ಪುಟ್ಟೇಗೌಡ ನಾಯಕ

kanoonu astra
Published on

ಬೆಂಗಳೂರು: ಸಮಾಜದಲ್ಲಿ ಕಾಣಿಸಿಕೊಳ್ಳುವ ಹಲವು ಸಮಸ್ಯೆಗಳನ್ನು ಸುಧಾರಿಸಿ ಸಮತೋಲನ ಕಾಪಾಡುವ ಕೆಲಸ ಮಾಡುವುದು ಕಾನೂನು. ಆದರೆ, ಇದರ ಬಗ್ಗೆ ಸರಿಯಾದ ಅರಿವಿಲ್ಲದೇ, ಜನರು ಹೇಗೆ ಸಮಸ್ಯೆಗಳಿಗೆ ಒಳಗಾಗಬಹುದು ಎನ್ನುವ ಕಥಾಹಂದರವನ್ನು ಒಳಗೊಂಡಿರುವ ಚಿತ್ರ ‘ಕಾನೂನು ಅಸ್ತ್ರ’.

ಈ ಚಿತ್ರಕ್ಕೆ ಪುಟ್ಟೇಗೌಡ ಎನ್. ಕಥೆ, ಸಂಭಾಷಣೆ ಬರೆದು ನಾಯಕನಾಗಿ ನಟಿಸುತ್ತಿದ್ದಾರೆ. ನಾಗರಾಜ ಎಂ.ಜಿ. ಗೌಡ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ನಟಿ ಅಪೂರ್ವ ‘ಕಾನೂನು ಅಸ’ ಆಡಿಯೋ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ವಿನಯ್ ಪಾಂಡವಪುರ ಸಾಹಿತ್ಯದ ನಾಲ್ಕು ಹಾಡುಗಳಿಗೆ ಮಂಜು ಮಹದೇವ ಸಂಗೀತ ನೀಡಿದ್ದಾರೆ. ನಾಯಕ ಪುಟ್ಟೇಗೌಡ, ‘ಜನರು ಬ್ಯಾಂಕ್‌ಗಳಿಂದ ವಾಹನ, ಗೃಹ ಹೀಗೆ ಹಲವು ರೀತಿ ಸಾಲ ಪಡೆದು ಬಡ್ಡಿ ಕಟ್ಟುವಾಗ ಎದುರಿಸುವ ಕಷ್ಟಗಳು, ಖಾಲಿ ಚೆಕ್‌ನಿಂದ ಆಗುವ ದುಷ್ಪರಿಣಾಮಗಳು, ಪತಿ-ಪತ್ನಿ ವಿಚ್ಛೇದನ ಪ್ರಕರಣಗಳು, ನಿರಪರಾಧಿಯನ್ನು ಕಾನೂನು ಹೇಗೆ ರಕ್ಷಿಸುತ್ತದೆ ಎನ್ನುವುದರ ಕುರಿತು ಚಿತ್ರ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಜಗದೀಶ್, ಎಚ್.ಜಿ. ದೊಡ್ಡಿ, ಬಂಡೆಬಾಬು, ಲಕ್ಷ್ಮೀನಾರಾಯಣ, ಸೌಮ್ಯರಾಜ್, ಯೋಗೇಶ್ ಶೆಟ್ಟಿ, ಚಂದನ, ಸೌಂದರ್ಯ ಮುಖ್ಯ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ವೆಂಕಿ ಯು.ಡಿ.ವಿ. ಸಂಕಲನ, ವಿನಯ್ ಗೌಡ ಛಾಯಾಗ್ರಹಣವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net