

‘ಕನ್ನಡತಿ‘ ಧಾರಾವಾಹಿ ಖ್ಯಾತಿಯ ‘ಬಡ್ಡೀಸ್‘ ಚಿತ್ರದಲ್ಲೂ ನಟಿಸಿರುವ ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” ಟ್ರೇಲರ್ ಬಿಡುಗಡೆಯಾಗಿದೆ. ಮಾಸ್ ಗೆ ಮಾಸ್, ಕ್ಲಾಸ್ ಗೆ ಕ್ಲಾಸ್ ಎನ್ನುವಂತೆ ರಾನಿ ಟ್ರೇಲರ್ ಮೂಡಿಬಂದಿದೆ. ಅದ್ದೂರಿ ಮೇಕಿಂಗ್ ಇರುವ ಈ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದು, ಇದೇ ತಿಂಗಳ 12 ರಾಜ್ಯಾದ್ಯಂತ ತೆರೆಗೆ ಬರಲಿದೆ.
ಕಿರಣ್ ರಾಜ್ ಆಕ್ಷನ್, ಲುಕ್, ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ಗುರುತೇಜ್ ಶೆಟ್ಟಿ ಸಂಭಾಷಣೆ, ಸಚಿನ್ ಬಸ್ರೂರು ಹಿನ್ನೆಲೆ ಸಂಗೀತ ಹಾಗೂ ರಾಘವೇಂದ್ರ ಬಿ ಕೋಲಾರ ಕ್ಯಾಮರಾ ವರ್ಕ್ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ಪ್ರತಿ ಸಾರಿಯು ಚಿತ್ರತಂಡ ನಮ್ಮದು ಫ್ಯಾಮಿಲಿ ಆಕ್ಷನ್ ಜಾನರ್ ಸಿನಿಮಾ ಎಂದು ಹೇಳಿಕೊಂಡು ಬಂದಿದೆ ಟ್ರೇಲರ್ ನಲ್ಲೂ ಆ ಅಂಶ ಕಾಣುತ್ತಿದೆ. "ರಾನಿ" ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಕಿರಣ್ಗೆ ಚಿತ್ರದಲ್ಲಿ ಸಮೀಕ್ಷಾ, ರಾಧ್ಯಾ ಮತ್ತು ಅಪೂರ್ವ ಮೂವರು ನಾಯಕಿಯರಿದ್ದು ರವಿಶಂಕರ್, ಬಿ. ಸುರೇಶ್, ಉಗ್ರಂ ಮಂಜು, ಉಗ್ರಂ ರವಿ, ಯಶ್ ಶೆಟ್ಟಿ, ಧರ್ಮಣ್ಣ, ಕರಿ ಸುಬ್ಬು, ಮೈಕೋ ನಾಗರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ.