ಚಂದದ ಜೀವನದತ್ತ ಚಂದನ್​ ಪಯಣ; ನನ್ನ ಗುರಿಯತ್ತ ಮತ್ತೆ ಗಮನ ಹರಿಸಿದ್ದೇನೆ ಎಂದ ಕನ್ನಡ ರ್ಯಾಪರ್​

ascCSacasc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕನ್ನಡ ರ್ಯಾಪರ್​, ನಟ ಚಂದನ್​ ಶೆಟ್ಟಿ ಹೊಸ ವರ್ಷವನ್ನು ಹೊಚ್ಚ ಹೊಸ ಹುರುಪಿನೊಂದಿಗೆ, ಸಾಹಸಮಯವಾಗಿ ಪ್ರಾರಂಭಿಸಿದ್ದಾರೆ. ಕಳೆದ ಜೂನ್​ನಲ್ಲಿ ನಿವೇದಿತಾ ಗೌಡಗೆ ವಿಚ್ಛೇದನ ನೀಡಿದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಟ, ಇದೀಗ ಮತ್ತೆ ಗೆಲುವಿನ ಟ್ರ್ಯಾಕ್ಟ್​ಗೆ ಮರಳುತ್ತಿದ್ದಾರೆ. ಅದರ ಭಾಗವಾಗಿ ವರ್ಕೌಟ್​, ಡಯಟ್​ ಪ್ರಾರಂಭಿಸಿರುವ ಅವರು, ಇಲ್ಲಸಲ್ಲದ ಚಿಂತೆಗಳ ಜತೆಜತೆಗೆ ತೂಕವನ್ನೂ ಇಳಿಸುತ್ತಿದ್ದಾರೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಮುಕ್ತವಾಗಿ ವಿಜಯವಾಣಿ ಜತೆ ಮಾತನಾಡಿರುವ ಚಂದನ್​ ಶೆಟ್ಟಿ, "ಕೆಲ ತಿಂಗಳ ಹಿಂದೆ ನನ್ನ ಜೀವನದಲ್ಲಿ ನಡೆದ ಟನೆಗಳಿಂದ ಡಿಪ್ರೆಷನ್​ಗೆ ಹೋಗಿದ್ದೆ. ಬಳಿಕ ಜೀವನದಲ್ಲಿ ಚೆನ್ನಾಗಿರಬೇಕು. ಬದುಕು ಬದಲಿಸಿಕೊಳ್ಳಬೇಕು ಅಂತನ್ನಿಸಿತು. ನಮ್ಮ ಕನ್ನಡ ಹಾಡುಗಳನ್ನು ವಿಶ್ವಾದ್ಯಂತ ಜನ ಕೇಳಬೇಕೆಂಬ ಗುರಿ ಇಟ್ಟುಕೊಂಡಿದ್ದವನು ನಾನು. ಇದೀಗ ಆ ಗುರಿಯತ್ತ ಗಮನ ಹರಿಸಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.

10 ಕೆಜಿ ತೂಕ ಇಳಿಕೆ

ಕಳೆದ ವರ್ಷ ಚಂದನ್​ ಶೆಟ್ಟಿ ನಟಿಸಿದ್ದ "ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರ ರಿಲೀಸ್​ ಆಗಿತ್ತು. ಇದೀಗ ಅವರು ನಾಯಕನಾಗಿರುವ, ಸುಜಯ್​ ಶಾಸ್ತ್ರಿ ನಿರ್ದೇಶನದ "ಎಲ್ರ ಕಾಲೆಳೆಯುತ್ತೆ ಕಾಲ' ಮತ್ತು ಕಿರಣ್​ ಕುಮಾರ್​ ನಿರ್ದೇಶಿಸುತ್ತಿರುವ "ಸೂತ್ರಧಾರಿ' ಸಿನಿಮಾ ರಿಲೀಸ್​ ಆಗಲಿವೆ. "ನಟನೆಯಲ್ಲಿ ಬಿಜಿಯಾದ ಕಾರಣ ಎರಡು ವರ್ಷಗಳಿಂದ ವರ್ಕೌಟ್​ನತ್ತ ಗಮನ ಹರಿಸಿದ್ದೇನೆ. "ಎಲ್ರ ಕಾಲೆಳೆಯುತ್ತೆ ಕಾಲ' ಚಿತ್ರಕ್ಕಾಗಿ ನಾನು ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಬಳಿಕ "ಸೂತ್ರಧಾರಿ'ಯ ಪೊಲೀಸ್​ ಪಾತ್ರಕ್ಕೆ ತೂಕ ಇಳಿಸಿಕೊಳ್ಳಬೇಕಿತ್ತು. ಹೀಗಾಗಿ 87 ಕೆಜಿಯಿಂದ 78 ಕೆಜಿಗೆ ಇಳಿಸಿಕೊಂಡೆ. ಕೆಲ ತಿಂಗಳಿನಿಂದ ನನ್ನ ಜೀವನದಲ್ಲಾದ ಕೆಲ ಟನೆಗಳಿಂದ ಮತ್ತೆ 85 ಕೆಜಿ ತೂಕ ಹೆಚ್ಚಿತ್ತು. ಇದೀಗ ಎರಡು ತಿಂಗಳಿನಿಂದ ಪ್ರತಿದಿನ ಡಯಟ್​ ಮತ್ತು ವರ್ಕೌಟ್​ ಮಾಡುತ್ತಿದ್ದೇನೆ. ಇದೀಗ 75 ಕೆಜಿ ತೂಕ ಇಳಿಸಿಕೊಂಡಿದ್ದೇನೆ' ಎನ್ನುವ ಚಂದನ್​ಗೆ ಮುಂದಿನ ದಿನಗಳಲ್ಲಿ ಸಿಕ್ಸ್​ ಪ್ಯಾಕ್​ ಮಾಡುವ ಪ್ಲ್ಯಾನ್​ ಕೂಡ ಇದೆಯಂತೆ.

8000 ಕಿಮೀ ರೋಡ್​ ಟ್ರಿಪ್​

ಚಂದನ್​ ಶೆಟ್ಟಿ ಜಿಮ್​ ತರಬೇತುದಾರ ಮ್ಯೂಟಂಟ್​ ರು ಇಬ್ಬರೂ ಬೆಂಗಳೂರಿನಿಂದ ಸ್ಪಿಟಿ ವ್ಯಾಲಿಗೆ 8000 ಕಿಮೀ ರೋಡ್​ ಟ್ರಿಪ್​ ಹೊರಟಿದ್ದಾರೆ. "ಇದು ನನ್ನ ಜೀವನದ ಮೊದಲ ಸುದೀರ್ ರೋಡ್​ ಟ್ರಿಪ್​. ಭಾನುವಾರ ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದೇವೆ. ಹೈದರಾಬಾದ್​, ನಾಗ್​ಪುರ, ಹಿಮಾಚಲ ಪ್ರದೇಶ, ಆಗ್ರಾ, ಚಂಢೀಡ ಮೂಲಕ ಸ್ಪಿಟಿ ವ್ಯಾಲಿಗೆ ಹೋಗಿ ಫೆ. 4ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದೇವೆ. ಹಾಗೇ ಪ್ರಯಾಗ್​ರಾಜ್​ನ ಮಹಾಕುಂಭ ಮೇಳಕ್ಕೆ ಹೋಗುವ ಪ್ಲಾ$್ಯನ್​ ಕೂಡ ಇದೆ' ಎಂದು ರೋಡ್​ ಟ್ರಿಪ್​ ಬಗ್ಗೆ ಮಾಹಿತಿ ನೀಡುತ್ತಾರೆ ಚಂದನ್​. ಹಾಗಂತ ಅವರು ವರ್ಕೌಟ್​, ಡಯಟ್​ನಿಂದ ದೂರವಾಗಿಲ್ಲ. ಬದಲಾಗಿ "ಹೈವೆಯಲ್ಲೇ ಅಡುಗೆ ಮಾಡಿಕೊಳ್ಳುತ್ತೇವೆ. ರಸ್ತೆಬದಿಯಲ್ಲೇ ರನ್ನಿಂಗ್​, ಬರ್ಪೀಸ್​, ಸ್ಕ್ವಾಟ್ಸ್​​, ಜಂಪಿಂಗ್​ ಜ್ಯಾಕ್ಸ್​ ಸೇರಿ ಕೆಲ ವರ್ಕೌಟ್​ ಮಾಡುತ್ತಿದ್ದೇನೆ. ಮಾನಸಿಕ, ದೈಹಿಕ ಚೇತರಿಕೆಗೆ ಈ ರೋಡ್​ ಟ್ರಿಪ್​ ಬೇಕಿತ್ತು' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net