ಸೆಟ್ಟೇರಿತು ಎಜುಕೇಟೆಡ್ ಬುಲ್ಸ್; ಹಿರಿಯ ನಿರ್ದೇಶಕ ಜಿ.ಕೆ. ಮುದ್ದುರಾಜ್ ನಿರ್ದೇಶಿಸನದ ಚಿತ್ರ

educated bulls
Published on

ಬೆಂಗಳೂರು: ‘ರಣಚಂಡಿ’, ‘ಜಯಭೇರಿ’, ‘ಕಿಟ್ಟಿ’, ‘ಪೊಲೀಸ್ ಬೇಟೆ’ ಸೇರಿ 30ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿರುವ ಹೆಗ್ಗಳಿಕೆ ಹಿರಿಯ ನಿರ್ದೇಶಕ ಜಿ.ಕೆ. ಮುದ್ದುರಾಜ್ ಅವರಿಗೆ ಸಲ್ಲುತ್ತದೆ. 2013ರಲ್ಲಿ ತೆರೆಗೆ ಬಂದ ‘ನಾವು ಗೆಳೆಯರು’ ಚಿತ್ರದ ಬಳಿಕ ಅವರು ಮತ್ತೆ ಸಿನಿಮಾ ನಿರ್ದೇಶಿಸಿರಲಿಲ್ಲ. ಇದೀಗ ಹತ್ತು ವರ್ಷಗಳ ನಂತರ ಮತ್ತೆ ‘ಎಜುಕೇಟೆಡ್ ಬುಲ್ಸ್’ ಎಂಬ ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ.

ಈ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರದ ಮುಹೂರ್ತ ಇತ್ತೀಚೆಗಷ್ಟೆ ನೆರವೇರಿದೆ. ನಿರ್ಮಾಪಕ ಭಾ.ಮ. ಹರೀಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಲಕ ತೋರಿದರೆ, ಡಾ. ವಿ. ನಾಗೇಂದ್ರ ಪ್ರಸಾದ್ ಕ್ಯಾಮರಾ ಚಾಲನೆ ಮಾಡಿದರು. ಚಿತ್ರಕ್ಕೆ ಮುದ್ದುರಾಜ್ ಅವರೇ ಕಥೆ, ಚಿತ್ರಕಥೆ ಬರೆದಿದ್ದು, ಜಗದೀಶ್ ಸಂಭಾಷಣೆ ಇರಲಿದೆ. ಒಂದೇ ಹಂತದಲ್ಲಿ ಬೆಂಗಳೂರು ಸುತ್ತುಮುತ್ತ 40 ದಿನಗಳಲ್ಲಿ ಚಿತ್ರೀಕರಣ ನಡೆಸುವ ಆಲೋಚನೆ ಚಿತ್ರತಂಡದ್ದು.

ಚಿತ್ರದಲ್ಲಿ ತನುಷ್, ಯಶಸ್ ಅಭಿ, ರಾಕೇಶ್ ಚಂದ್ರ, ಹರ್ಷಿಣಿ ಪ್ರಮುಖ ತಾರಾಗಣದಲ್ಲಿದ್ದಾರೆ. ರಾಘವೇಂದ್ರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಸಂಜೀವ್ ರೆಡ್ಡಿ ಸಂಕಲನದಲ್ಲಿ ‘ಎಜುಕೇಟೆಡ್ ಬುಲ್ಸ್’ ಮೂಡಿಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net