ಸಂಬಂಧಗಳ ಕುರಿತ ಪರಿಶುದ್ದಂ; ಗ್ರ್ಯಾಮಿ ಹೊಸ್ತಿಲಲ್ಲಿ ಕನ್ನಡ ಚಿತ್ರದ ಇಂಗ್ಲೀಷ್ ಗೀತೆ

parishuddham
Published on

ಬೆಂಗಳೂರು: ಆರೋನ್ ಕಾರ್ತಿಕ್ ವೆಂಕಟೇಶ್ ಕಥೆ, ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿ, ನಿರ್ದೇಶಿಸುತ್ತಿರುವ ಚಿತ್ರ ‘ಪರಿಶುದ್ದಂ’. ಮದುವೆ ಎಂಬ ಪದ್ದತಿ, ಗಂಡ-ಹೆಂಡತಿ ನಡುವಿನ ಸಂಬಂಧ ಪರಿಶುದ್ದವಾದುದು, ಅದರಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ಆಗಬಾರದು ಎಂಬ ಸಂದೇಶ ಹೇಳುವ ಪ್ರಯತ್ನ ಮಾಡಿದ್ದಾರೆ ಕಾರ್ತಿಕ್.

‘ಈ ವಿಷಯವನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಲಾಗಿದೆ. ನಟಿ ಕಲ್ಪನಾರಂತೆ ಸ್ಪರ್ಶ ರೇಖಾ ತೂಕದ ಪಾತ್ರವನ್ನು ನಿರ್ವಹಿಸಿದ್ದಾರೆ. ಅತಿಥಿಯಾಗಿ ಎಂ.ಡಿ.ಕೌಶಿಕ್ ಕೊನೆಯ ದೃಶ್ಯದಲ್ಲಿ ಬರಲಿದ್ದು, ಭಾಗ-2ರಲ್ಲಿ ಇವರಿಂದಲೇ ಸಿನಿಮಾ ಶುರುವಾಗುತ್ತದೆ. ಚಿತ್ರದಲ್ಲಿ ಇಂಗ್ಲೀಷ್ ಗೀತೆಯೊಂದು ಇರಲಿದ್ದು, ಇದನ್ನು ಗ್ರ್ಯಾಮಿ ಪ್ರಶಸ್ತಿಗೆ ಕಳುಹಿಸಲಾಗಿದೆ. ಎರಡೇ ಸ್ವರದಲ್ಲಿ ಕ ಅಕ್ಷರದೊಂದಿಗೆ ಮತ್ತೊಂದು ಹಾಡನ್ನು ಬರೆಯಲಾಗಿದ್ದು ಎಂ.ಡಿ.ಪಲ್ಲವಿ ಧ್ವನಿಯಾಗಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಕಾರ್ತಿಕ್ ವೆಂಕಟೇಶ್. ಬೆಂಗಳೂರು, ಮಂಗಳೂರು, ತುಮಕೂರು, ಬ್ಯಾಂಕಾಕ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸ್ಪರ್ಶ ರೇಖಾಗೆ ಜೋಡಿಯಾಗಿ ರೋಹನ್ ಕಿಡಿಯಾರ್ ನಟಿಸಿದ್ದು, ದಿಶಾ ಪೂವಯ್ಯ, ಯತಿರಾಜ್, ಭಾರ್ಗವ್, ಅರ್ಚನಾ, ವಿಕ್ಟರಿ ವಾಸು, ಕುರಿ ರಂಗ, ಮೈಸೂರು ರಮಾನಂದ್, ರಾಜ್ ಚರಣ್, ದುಬೈ ರಫೀಕ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ನಿಖಿಲ್ ಸಂಕಲನ, ವಿನಯ್ ಮೂರ್ತಿ ಸಂಭಾಷಣೆ, ರಾಮ್‌ದೇವ್ ಸಾಹಸವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net