ಸಂಕಷ್ಟದಲ್ಲಿ ಅವಳೇ ನನ್ ಹೆಂಡ್ತಿ ಚಿತ್ರದ ನಿರ್ದೇಶಕ! ದಾನಿಗಳ ನಿರೀಕ್ಷೆಯಲ್ಲಿ ಡೈರೆಕ್ಟರ್

s umesh
Published on

ಬೆಂಗಳೂರು: ಅವಳೇ ನನ್ ಹೆಂಡ್ತಿ ಸಿನಿಮಾ ನಿಮಗೆಲ್ಲರಿಗೂ ನೆನಪಿರಬಹುದು. ಕಾಶಿನಾಥ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಆ ಸಿನಿಮಾ ತೆಲುಗು, ತಮಿಳು ಹಾಗೂ ಹಿಂದಿಗೆ ರಿಮೇಕ್ ಆಗಿತ್ತು. ಇದೀಗ ಆ ಚಿತ್ರದ ಡೈರೆಕ್ಟರ್​ ಸಂಕಷ್ಟದಲ್ಲಿದ್ದು, ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.


ಅವಳೇ ನನ್ ಹೆಂಡ್ತಿ ಸಿನಿಮಾ 80ರ ದಶಕದಲ್ಲಿ ಬಿಡುಗಡೆಗೊಂಡಿತ್ತು. ಎಸ್ ಉಮೇಶ್ ನಿದೇರ್ಶನದ ಚಿತ್ರ ಸಾಕಷ್ಟು ಜನರ ಮನಸ್ಸು ಗೆದ್ದಿತ್ತು. ಬದುಕು ಜಟಕಾ ಬಂಡಿ, ಎಲ್ಲರಂತಲ್ಲ ನನ ಗಂಡ ಹೀಗೆ ಅನೇಕ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಸುಮಾರು 48 ವರ್ಷಗಳ ಕಾಲ ಚಿತ್ರರಂಗದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದ ಉಮೇಶ್ ಅವರು ಸದ್ಯ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೇ ಕಿಡ್ನಿ ಪೇಲ್ಯೂರ್ ಆಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಸಹಾಯ ಮಾಡಲು ಬಯಸುವವರು ಹಾಗೂ ಅವರು ಮನವಿ ಮಾಡುವ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:

ಕಳೆದ ಒಂದು ವರ್ಷದಿಂದ ಆರ್ಥಿಕ ಸಮಸ್ಯೆಯಲ್ಲಿರುವ ಉಮೇಶ್ ಅವರು ಬಾಡಿಗೆ ಮನೆಯಲ್ಲಿದ್ದು, ಮನೆ ಬಾಡಿಗೆ ಕಟ್ಟುವುದಕ್ಕೂ ಹಣವಿಲ್ಲವಂತೆ. ಮಗನ ಫೀಸ್ ಕಟ್ಟಿಲ್ಲ ಎಂದು ಅವರು ಫೇಸ್ಬುಕ್​ ವಿಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆಸ್ಪತ್ರೆ ಖರ್ಚುಗಳಿಗೂ ದುಡ್ಡಿಲ್ಲದೆ ಒದ್ದಾಡುತ್ತಿರುವ ನನಗೆ ಸಹಾಯ ಮಾಡಿ ಎಂದು ಅವರು ಕೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net