

ನ್ಯಾವಾರಿಗೆ ಕಮ್ಮಿ ಇಲ್ಲ ಎಂಬಂತೆ ಬೀಗುತ್ತಿದ್ದಾರೆ ಕನ್ನಡದ ಕಿರುತೆರೆ ನಟಿಯರು. ಹೆಸರಿಗಷ್ಟೇ ಕಿರುತೆರೆ ನಟಿಯಾದರೂ, ಅವರ ಫ್ಯಾನ್ಬೇಸ್ಗೇನೂ ಕೊರತೆ ಇಲ್ಲ. ಎಲ್ಲ ಮನೆಗಳ ಮನೆ ಮಗಳಾಗಿಯೇ ಅವರೂ ಮಿಂಚು ಹರಿಸುತ್ತಿದ್ದಾರೆ. ಕೋಟ್ಯಂತರ ಹೆಂಗಳೆಯರ ಮನಸ್ಸು ಗೆದ್ದು, ಯುವಕರ ನಿದ್ದೆಕೆಡಿಸಿದ ನಟಿಯರೂ ಕನ್ನಡ ಕಿರುತೆರೆಯಲ್ಲಿದ್ದಾರೆ. ಆನ್ಸ್ಕ್ರೀನ್ನಲ್ಲಿ ಒಂದು ರೀತಿ ಆಫ್ಸ್ಕ್ರೀನ್ನಲ್ಲಿ ಮತ್ತೊಂದು ರೀತಿ ಕಾಣಿಸಿಕೊಂಡು ‘ಅಯ್ಯೋ ಇದು ಅವರೇನಾ?’ ಎಂದು ಬಾಯಿಮೇಲೆ ಬೆರಳಿಟ್ಟುಕೊಳ್ಳುವಂತೆಯೂ ಮಾಡಿದ ಹಲವರಿದ್ದಾರೆ. ಇದೀಗ ಆ ಪೈಕಿ ಕೆಲವೇ ದಿನಗಳಲ್ಲಿ ಎಲ್ಲರ ಮನೆಯ ನೆಚ್ಚಿನ ಮಗಳಾದವರು ‘ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ. ತೆರೆಮೇಲೆ ಕೇವಲ ಲಂಗ ದಾವಣಿ ಮೂಲಕ ಗಮನ ಸೆಳೆಯುವ ಈ ನಟಿ, ಆಫ್ಸ್ಕ್ರೀನ್ನಲ್ಲಿ ಸಖತ್ ಫ್ಯಾಷನೆಬಲ್ ಎಂದರೆ ನೀವು ನಂಬಲೇಬೇಕು.
ಸಾಂಪ್ರದಾಯಿಕ ಶೈಲಿಯಲ್ಲಿಯೇ ಚೆಂದ...
ತೆರೆಮೇಲೆ ಮನೆ ಮಗಳಂತೆ ಲಂಗ ದಾವಣಿಯಲ್ಲಿಯೇ ಕಾಣುವ ಪಾರು ಅಲಿಯಾಸ್ ಮೋಕ್ಷಿತಾ, ಆಫ್ಸ್ಕ್ರೀನ್ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಸಹಜ ಕುತೂಹಲ ಅವರ ಅಭಿಮಾನಿಗಳಿಗಿರುತ್ತದೆ. ಅದಕ್ಕೆ ತಕ್ಕಂತೆ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಣ್ಣ ಬಣ್ಣದ ಕಾಸ್ಟೂಮ್ನಲ್ಲಿನ ಫೋಟೋಗಳ ಗುಚ್ಛಗಳನ್ನೇ ಅವರು ಹಾಕುತ್ತಿರುತ್ತಾರೆ. ಅದರಲ್ಲೂ ಸಾಂಪ್ರದಾಯಿಕ ಶೈಲಿಯ ಉಡುಗೆಗಳ ಮೇಲೆ ಅವರಿಗೆ ಒಂದು ತೂಕ ಹೆಚ್ಚೇ ವ್ಯಾಮೋಹ. ಅದಕ್ಕೆ ಸಾಕ್ಷಿ ಎಂಬಂತೆ ಸೀರೆಯಲ್ಲಿನ ಫೋಟೋಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.
ಜೀನ್ಸ್ ನಲ್ಲಿಯೂ ಬೆಡಗು ಬಿನ್ನಾಣ..
ಫ್ಯಾಷನ್ ಜತೆಗೆ ಸದ್ಯದ ಟ್ರೆಂಡ್ಗಳನ್ನೂ ಮೋಕ್ಷಿತಾ ಅಷ್ಟೇ ಸೂಕ್ಷ್ಮವಾಗಿ ಫಾಲೋ ಮಾಡ್ತಾರೆ. ಟ್ರೆಂಡಿ ಬಟ್ಟೆಗಳನ್ನೂ ಧರಿಸಿ ಆಗಾಗ ಫೋಟೋಶೂಟ್ಗೂ ಮುಖವೊಡ್ಡುತ್ತಾರೆ. ನಾನು ಸಾಂಪ್ರದಾಯಿಕ ಉಡುಗೆಗೂ ಸೈ, ಜೀನ್ಸ್ಗೂ ಜೈ ಎನ್ನುತ್ತಾರವರು. ಜೀನ್ಸ್ ಜತೆಗೆ ಗೌನ್ಗಳು, ಕಲರ್ಫುಲ್ ಫ್ರಾಕ್ಗಳು, ಸ್ಲೀವ್ ಲೆಸ್ ಬ್ಲೌಸ್, ಅದಕ್ಕೊಪ್ಪುವ ಸೀರೆ.. ಮಾಡರ್ನ್ ಟಚ್ ಇರುವ ವಿಭಿನ್ನ ಬಗೆಯ ವಿನ್ಯಾಸದ ಉಡುಪುಗಳಲ್ಲಿಯೂ ಮೋಕ್ಷಿತಾ ಗಮನಸೆಳೆಯುತ್ತಾರೆ.
ಸೀರಿಯಲ್ ಜತೆಗೆ ಸಿನಿಮಾಕ್ಕೂ ಎಂಟ್ರಿ
ಧಾರಾವಾಹಿಯಲ್ಲಿ ನಟಿಸಿದ ಬಹುತೇಕ ನಟಿಯರು ಸಿನಿಮಾಕ್ಕೂ ಎಂಟ್ರಿಕೊಟ್ಟಿದ್ದಾರೆ. ಅದೇ ರೀತಿ ನಟಿ ಮೋಕ್ಷಿತಾ ಪೈ ಸಹ ಸಿನಿಮಾ ಅವಕಾಶಗಳನ್ನು ಮುಕ್ತವಾಗಿ ಸ್ವೀಕರಿಸುತ್ತಿದ್ದಾರೆ. ಧಾರಾವಾಹಿ ಜತೆಜತೆಗೇ ನಿರ್ಭಯಾ 2 ಹೆಸರಿನ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನೂ ಹಲವು ಸಿನಿಮಾಗಳ ಕಥೆಗಳನ್ನೂ ಕೇಳುತ್ತಿದ್ದಾರೆ.