

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಮೇಘಾ ಶೆಟ್ಟಿ, ನಂತರ "ತ್ರಿಬಲ್ ರೈಡಿಂಗ್' ಸಿನಿಮಾದಲ್ಲಿ ಮೊದಲ ಬಾರಿಗೆ ಹಿರಿತೆರೆಗೆ ಎಂಟ್ರಿ ಕೊಟ್ಟರು. ಬಳಿಕ ಸಿನಿಮಾಗಳಲ್ಲೇ ಹೆಚ್ಚು ಬಿಜಿಯಾದ ಅವರು "ದಿಲ್ ಪಸಂದ್' ಮತ್ತು "ಕೈವ' ಚಿತ್ರಗಳಲ್ಲಿ ಮಿಂಚಿದ್ದಾರೆ. ಇದೀಗ ಕನ್ನಡದಲ್ಲಿ "ಆಫ್ಟರ್ ಆಪರೇಷನ್ ಲಂಡನ್ ಕೆಫೆ', "ಗ್ರಾಮಾಯಣ' ಮತ್ತು "ಚೀತಾ'ಗಳಲ್ಲಿ ನಟಿಸುತ್ತಿರುವ ಮೇಘಾ, ಅದರ ನಡುವೆಯೇ ತಮಿಳಿಗೆ ಡೆಬ್ಯೂ ಮಾಡಿದ್ದಾರೆ.
ಚಿತ್ರದ ಹೆಸರು "ಕಾಳೈಯಾ'. ಈ ಚಿತ್ರಕ್ಕೆ ಎಂ. ಗುರು ಆ್ಯಕ್ಷನ್ -ಕಟ್ ಹೇಳುತ್ತಿದ್ದು, ಸೋಮವಾರ ಚೆನ್ನೈನಲ್ಲಿ ಮುಹೂರ್ತ ನೆರವೇರಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಮೇಘಾ ಕಾಲಿವುಡ್ನ ಶಶಿಕುಮಾರ್, ಭರತ್ ಮತ್ತು ಸತ್ಯರಾಜ್ರಂತಹ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
"ನನ್ನ ಹಿಂದಿನ ಕೆಲಸ ನೋಡಿ, ಈ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು. ಸ್ಕ್ರಿಪ್ಟ್ ಡಿಸ್ಕಷನ್ ಮಾಡಿದೆವು. ಶೂಟಿಂಗ್ಗೂ 15 ದಿನ ಮುನ್ನ ಸ್ಕ್ರಿಪ್ಟ್ ಕೂಡ ಕಳುಹಿಸಿಕೊಟ್ಟಿದ್ದರು. ಇದೊಂದು ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ್ಯಾಮಿಲಿ ಡ್ರಾಮಾ. ಮಂಗಳವಾರದಿಂದ ಚಿತ್ರದ ಮೊದಲ ಹಂತದ ಶೂಟಿಂಗ್ ಪ್ರಾರಂಭವಾಗಿದೆ. ನಾನಿಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈಗಲೇ ಪಾತ್ರದ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ತಮಿಳು, ತೆಲುಗು ಮಾತನಾಡುತ್ತೇನೆ. ಮಲಯಾಳಂ ಕೂಡ ಸ್ವಲ್ಪ ಗೊತ್ತು. ನಾನೇ ನನ್ನ ಪಾತ್ರಕ್ಕೆ ಡಬ್ ಮಾಡಬೇಕು ಅಂತ ಅಂದುಕೊಂಡಿದ್ದೇನೆ' ಎಂದು ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ಮೇಘಾ ಶೆಟ್ಟಿ.
ಸಡಗರ ರಾವೇಂದ್ರ ನಿರ್ದೇಶಿಸುತ್ತಿರುವ "ಆ್ಟರ್ ಆಪರೇಷನ್ ಲಂಡನ್ ಕೆೆ' ಚಿತ್ರದಲ್ಲಿ ಮೇಘಾ, ಕವೀಶ್ ಶೆಟ್ಟಿಗೆ ನಾಯಕಿಯಾಗಿದ್ದು, ಚಿತ್ರ ತೆರೆಗೆ ಬರಲು ರೆಡಿಯಿದೆ. "ವಿನಯ್ ರಾಜಕುಮಾರ್ ಅವರ ಜತೆ "ಗ್ರಾಮಾಯಣ' ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದು ಸುಮಾರು 25ರಿಂದ 30 ದಿನಗಳ ಕಾಲ ಚಿತ್ರೀಕರಣ ಬಾಕಿಯಿದೆ. ಇನ್ನು ಪ್ರಜ್ವಲ್ ದೇವರಾಜ್ ಅವರ ಜತೆ "ಚೀತಾ' ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಒಂದು ಹಾಡು ಮತ್ತು ಕೆಲ ಪ್ಯಾಚ್ ವರ್ಕ್ ಬಾಕಿಯಿದೆ. ಜತೆಗೆ ಇನ್ನೂ ಮೂರು ಕಥೆ ಕೇಳಿದ್ದೇನೆ. ಇನ್ನೆರಡು ತಿಂಗಳಲ್ಲಿ ಅದರಲ್ಲಿ ಒಂದು ಸಿನಿಮಾ ಅನೌನ್ಸ್ ಆಗಲಿದೆ' ಎಂದು ಮಾಹಿತಿ ನೀಡುತ್ತಾರೆ.