

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕಿರುತೆರೆಯಿಂದ ಕರಿಯರ್ ಆರಂಭಿಸಿ ಸದ್ಯ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ನಟ ದೀಕ್ಷಿತ್ ಶೆಟ್ಟಿ ಕನ್ನಡದಲ್ಲಿ "ದಿಯಾ', "ಕೆಟಿಎಂ', "ಬ್ಲಿಂಕ್', ತೆಲುಗಿನಲ್ಲಿ "ದಸರಾ' ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರತಿಭೆ ಇದ್ದರೆ ಯಾವ ಭಾಷೆಯಲ್ಲಿ ಬೇಕಾದರೂ ಗುರುತಿಸಿಕೊಳ್ಳಬಹುದು ಎಂಬುದಕ್ಕೆ ಪಕ್ಕಾ ಉದಾಹರಣೆಯಂತಿರುವ ಅವರು, ಇದೀಗ ಮಲಯಾಳಂ ಮತ್ತು ತಮಿಳು ಚಿತ್ರರಂಗಗಳಿಗೂ ಎಂಟ್ರಿ ಕೊಟ್ಟಿದ್ದು, ಇದೀಗ ಮಲೇಷ್ಯಾದಲ್ಲಿ ಕಾಲಿವುಡ್ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಿದ್ದಾರೆ. ಅದರ ನಡುವೆಯೇ ದೀಕ್ಷಿತ್ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. "ಹಿಂದಿನ ಕೆಲಸ ನೋಡಿ ಹೊಸ ಕೆಲಸಗಳು ಸಿಗುತ್ತಿವೆ. ತೆಲುಗಿನ "ಕಿಂಗ್ ಜ್ಯಾಕ್ ಕ್ವೀನ್'ನಲ್ಲಿ ಕೆಲ ತಮಿಳು ತಂತ್ರಜ್ಞರು ಕೆಲಸ ಮಾಡಿದ್ದರು. ಅವರು ನನ್ನನ್ನು ಈ ತಮಿಳು ಚಿತ್ರಕ್ಕೆ ರೆರ್ ಮಾಡಿದ್ದರು. ನಿರ್ದೇಶಕ ರಾಮ್ ವೆಂಕಟ್ಗೆ ನನ್ನ ಪಾರ್ಮೆನ್ಸ್ ಇಷ್ಟವಾಗಿ, ಚಿತ್ರದಲ್ಲಿ ಅವಕಾಶ ನೀಡಿದರು. ಸದ್ಯ ಮಲೇಷ್ಯಾದಲ್ಲಿ ಚಿತ್ರೀಕರಣ ನಡೆಯುತ್ತಿದೆ. 2019ರಲ್ಲಿ ನಡೆದ ನೈಜ ಟನೆಯಾಧಾರಿತ ಸರ್ವೈವಲ್ ಡ್ರಾಮಾ ಚಿತ್ರವಿದು. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.
"ದಿಯಾ' ಬಳಿಕ ಇದುವರೆಗೂ ದೀಕ್ಷಿತ್ ಹಲವು ಭಾಷೆಗಳ 320 ಕಥೆಗಳನ್ನು ಕೇಳಿದ್ದಾರಂತೆ. "ಶೂಟಿಂಗ್ ಇಲ್ಲದಿದ್ದರೆ ಕಥೆ ಕೇಳುವುದೇ ನನ್ನ ಕೆಲಸ. ಇದುವರೆಗೂ ಒಂದೇ ರೀತಿಯ ಚಿತ್ರಗಳಲ್ಲಿ ನಾನು ನಟಿಸಿಲ್ಲ. ಬೇರೆ ಬೇರೆ ಜಾನರ್ಗಳಲ್ಲಿ ನಟಿಸಲು ಇಷ್ಟಪಡುತ್ತೇನೆ. ಇದುವರೆಗಿನ ಚಿತ್ರಗಳು ಮಾತ್ರವಲ್ಲ ಮುಂದೆ ಬರಲಿರುವ ಸಿನಿಮಾಗಳು ಸಹ ಭಿನ್ನ, ವಿಭಿನ್ನ ಕಥೆಗಳೇ ಆಗಿರಲಿವೆ' ಎಂದು ಹೇಳಿಕೊಳ್ಳುತ್ತಾರೆ.
ಕನ್ನಡದಲ್ಲಿ ಸ್ಟಾರ್ ಸಿನಿಮಾಗಳಿಗೆ ಪ್ರೇಕ್ಷಕರು ಬರುವಂತೆ ಇತರೆ ಚಿತ್ರಗಳಿಗೆ ಬರುವುದಿಲ್ಲ ಎಂಬ ಮಾತಿದೆ. ಇದೇ ಕಾರಣಕ್ಕೆ ದೊಡ್ಡ ನಟರನ್ನು ಹೊರತುಪಡಿಸಿ, ಎರಡನೇ ಸಾಲಿನ ನಾಯಕರು ಜನರನ್ನು ಥಿಯೇಟರ್ಗೆ ಕರೆತರಲು ಹೋರಾಟ ನಡೆಸುತ್ತಲೇ ಇದ್ದಾರೆ. ಈ ಬಗ್ಗೆ ದೀಕ್ಷಿತ್, "ಥಿಯೇಟರ್ ಸೆಟಪ್, ನಾನ್ ಪೆಮ್ ಟೈಮ್ ಶೋಗಳನ್ನು ನೀಡುವುದು, ಒಂದೇ ವಾರ ಹೆಚ್ಚೆಚ್ಚು ಸಿನಿಮಾಗಳು ರಿಲೀಸ್ ಆಗುವುದು ಸೇರಿ ಹಲವು ಸಮಸ್ಯೆಗಳಿವೆ. ಕಂಟೆಂಟ್ ಚೆನ್ನಾಗಿದ್ದರೂ ಜನರನ್ನು ಥಿಯೇಟರ್ಗೆ ಕರೆತರಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಇಡೀ ಚಿತ್ರರಂಗ ಎಚ್ಚೆತ್ತುಕೊಳ್ಳಬೇಕಿದೆ. ಮುಂದಿನ ಪೀಳಿಗೆಯ ನಟರನ್ನು ಪೋಷಿಸುವ ಅನಿವಾರ್ಯತೆಯಿದೆ' ಅಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ಪ್ಯಾನ್ ಇಂಡಿಯಾ ಸವಾರಿ ಹೊರಟು ವರ್ಷಗಳಾಗಿವೆ. ರಶ್ಮಿಕಾ ಜತೆ ದೀತ್ "ದ ಗರ್ಲ್ಫ್ರೆಂಡ್' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ""ದಸರಾ'ದಲ್ಲಿ ನನ್ನ ನಟನೆ ನೋಡಿ "ದ ಗರ್ಲ್ಫ್ರೆಂಡ್ನಲ್ಲಿ ಅವಕಾಶ ನೀಡಿದರು. ನಾನು, ರಶ್ಮಿಕಾ ಕನ್ನಡಿಗರಾದ ಕಾರಣ, ಸೆಟ್ನಲ್ಲೂ ಕನ್ನಡದಲ್ಲೇ ಮಾತನಾಡುತ್ತಿದ್ದೆವು. ಸಂಭಾಷಣೆ ಹೇಗೆ ತೆಗೆದುಕೊಳ್ಳಬೇಕು ಅಂತ ಚರ್ಚಿಸುತ್ತಿದ್ದೆವು. ರಶ್ಮಿಕಾ ತುಂಬ ಹಾರ್ಡ್ ವರ್ಕಿಂಗ್' ಎನ್ನುತ್ತಾರೆ ದೀಕ್ಷಿತ್.
ದೀಕ್ಷಿತ್ ಸದ್ಯ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದು, ಮಲಯಾಳಂನಲ್ಲಿ ನಟಿಸಿರುವ ಇನ್ನೂ ಹೆಸರಡಿದ ಸಿನಿಮಾ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಆ ಚಿತ್ರದಲ್ಲಿ ದೀತ್ ಹೆಸರಾಂತ ಮಾಲಿವುಡ್ ನಟ ಶೈನ್ ಟಾಮ್ ಚಾಕೊ ಜತೆ ತೆರೆ ಹಂಚಿಕೊಂಡಿದ್ದಾರೆ. ಜತೆಗೆ ಇನ್ನೊಂದು ಮಲಯಾಳಂ ಚಿತ್ರದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಇದೇ ತಿಂಗಳಂತ್ಯದಲ್ಲಿ ಅವರು ನಟಿಸಿರುವ "ಟಚ್ ಮಿ ನಾಟ್' ಎಂಬ ತೆಲುಗು ವೆಬ್ಸರಣಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಹಾಗೇ "ದ ಗರ್ಲ್ಫ್ರೆಂಡ್' ಕೂಡ ಸದ್ಯ ಪೋಸ್ಟ್-ಪ್ರೊಡಕ್ಷನ್ನಲ್ಲಿದೆ. ಅದರ ನಡುವೆ "ಬ್ಲಿಂಕ್' ನಿರ್ದೇಶಕ ಶ್ರೀನಿಧಿ ಮತ್ತು ದೀಕ್ಷಿತ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಇದೇ ತಿಂಗಳಂತ್ಯದಲ್ಲಿ ಘೋಷಣೆಯಾಗಲಿದೆ.