ತೆರೆಗೆ ಬರಲಿದೆ ಕೋಮುದ್ವೇಷಕ್ಕೆ ಬಲಿಯಾದ ಟೈಲರ್​ ಕನ್ಹಯ್ಯಾ ಲಾಲ್​ ಸಾಹು ಬಯೋಪಿಕ್​!

aascasc
Published on

ನೈಜ ಟನೆಯಾಧಾರಿತ ಚಿತ್ರಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ನೈಜ ಟನೆಗಳಿಂದ, ವ್ಯಕ್ತಿಗಳ ಜೀವನದಿಂದ ಆಧರಿಸಿದ ಅಥವಾ ಪ್ರೇರಣೆ ಪಡೆದ ಸಿನಿಮಾಗಳ ಸಂಖ್ಯೆ ಹೆಚ್ಚಿದೆ. 2025ರಲ್ಲಿಯೇ ಇದುವರೆಗೆ "ಛಾವಾ', "ಸ್ಕೈಫೋ ರ್ಸ್​', "ದ ಡಿಪ್ಲೊಮ್ಯಾಟ್​', "ಎಮರ್ಜೆನ್ಸಿ', "ಸೂಪರ್​ಬಾಯ್ಸ್​ ಆಫ್​ ಮಾಲೆಗಾಂವ್​' ಚಿತ್ರಗಳು ರಿಲೀಸ್​ ಆಗಿದ್ದು, "ಫುಲೆ', "ಕೇಸರಿ 2' ಸೇರಿ ಹಲವು ಸಿನಿಮಾಗಳು ತೆರೆಗೆ ಬರಲು ಸಿದ್ಧತೆ ನಡೆಸಿವೆ.

ಇದೀಗ ಈ ಈ ಸಾಲಿಗೆ ಮತ್ತೊಂದು ಸಿನಿಮಾ "ಜ್ಞಾನವಾಪಿ ಫೈಲ್ಸ್​: ಎ ಟೈಲರ್ಸ್​ ಮರ್ಡರ್​ ಸ್ಟೋರಿ' ಕೂಡ ಸೇರಿದ್ದು, ಇದೇ ಜೂ. 27ರಂದು ದೇಶಾದ್ಯಂತ ರಿಲೀಸ್​ ಆಗಲಿದೆ. 2022ರ ಜೂ. 28ರಂದು ಉದಯಪುರದಲ್ಲಿ ಟೈಲರ್​ ಕನ್ಹಯ್ಯಾ ಲಾಲ್​ ಸಾಹುನನ್ನು ಇಬ್ಬರು ಧರ್ಮಾಂಧರು ಕೊಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕಿ ನೂಪರ್​ ಶರ್ಮಾ ಪರ ಕಮೆಂಟ್​ ಮಾಡಿದ್ದೇ ಕನ್ಹಯ್ಯಾ ಲಾಲ್​ ಜೀವನಕ್ಕೆ ಮುಳುವಾಗಿತ್ತು. ಕನ್ಹಯ್ಯಾ ಹತ್ಯೆ ಮಾಡಿದ್ದ ಮೊಹಮ್ಮದ್​ ರಿಯಾಜ್​ ಅಟ್ಟಾರಿ ಮತ್ತು ಮೊಹಮ್ಮದ್​ ಘೌಸ್​ರನ್ನು ಬಂಧಿಸಲಾಯಿತಾದರೂ, ದೇಶಾದ್ಯಂತ ಈ ಪ್ರಕರಣ ಆತಂಕ ಸೃಷ್ಟಿಸಿತ್ತು.

ಭರತ್​ ಶ್ರೀನಾತೆ ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದು, ಕನ್ಹಯ್ಯಾ ಪಾತ್ರದಲ್ಲಿ ಬಾಲಿವುಡ್​ನ ಖ್ಯಾತ ನಟ ವಿಜಯ್​ ರಾಜ್​ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ರಜನೀಶ್​ ದುಗ್ಗಲ್​, ಪ್ರೀತಿ ಝಂಗಿಯಾನಿ, ಆದಿತ್ಯ ರಾವ್​ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net