ಆಸ್ಕರ್ ಅಂಗಳದಲ್ಲಿ ‘ಕಂಗುವಾ’, ‘ಆಡುಜೀವಿತಂ’: ಪ್ರತಿಷ್ಠಿತ ಪ್ರಶಸ್ತಿಯ ರೇಸ್‌ನಲ್ಲಿ ಭಾರತದ ಎಂಟು ಸಿನಿಮಾಗಳು

ascar2
Published on

ಪ್ರತಿಷ್ಠಿತ 97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಇನ್ನು ಎರಡು ತಿಂಗಳು ಬಾಕಿಯಿದೆ. ಮಾ.2ರಂದು ಅದ್ದೂರಿ ಕಾರ್ಯಕ್ರಮ ನಡೆಯಲಿದ್ದು, ವಿಶ್ವಾದ್ಯಂತ ಚಿತ್ರರಂಗಗಳು ಮತ್ತು ಸಿನಿಮಾಪ್ರಿಯರ ನೋಟ ಆಸ್ಕರ್‌ನತ್ತ ನೆಟ್ಟಿದೆ. ಕೆಲ ದಿನಗಳ ಹಿಂದೆ ‘ಅತ್ಯುತ್ತಮ ವಿದೇಶಿ ಚಿತ್ರ’ ವಿಭಾಗದಲ್ಲಿ ಮೊದಲಿಗೆ ಸ್ಥಾನ ಪಡೆದುಕೊಂಡಿದ್ದ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಆಸ್ಕರ್ ಸ್ಫರ್ಧೆಯಿಂದ ಹೊರಬಂದು ಭಾರತೀಯರಿಗೆ ನಿರಾಸೆ ಮೂಡಿಸಿತ್ತು. ಆದರೆ, ಮಲಯಾಳಂನ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’, ಕನ್ನಡದ ಚಿದಾನಂದ ನಾಯಕ್ ನಿರ್ದೇಶನದ ‘ಸೂರ್ಯಕಾಂತಿ ಹೂಗೆ ಮೊದಲೇ ಗೊತ್ತಿತ್ತು ’ (ಸನ್‌ಲ್ವರ್ಸ್ ವರ್ ದ ಸ್ಟ್ ಒನ್ಸ್ ಟು ನೋ), ಭಾರತ ಮೂಲದ ಯುಕೆ ಸಿನಿಮಾ ‘ಸಂತೋಷ್’ ಅಧಿಕೃತವಾಗಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿದ್ದವು. ಈ ಮಧ್ಯೆ, ಹಲವು ಭಾರತೀಯ ಸಿನಿಮಾಗಳು ಸ್ವತಂತ್ರವಾಗಿ ನಾಮನಿರ್ದೇಶನ ಸಲ್ಲಿಸಿ, ಆಸ್ಕರ್ ಅದೃಷ್ಟಪರೀಕ್ಷೆಗಿಳಿದಿವೆ. ಈ ಹಿಂದೆ ರಣದೀಪ್ ಹೂಡಾ ನಿರ್ದೇಶಿಸಿ, ನಟಿಸಿರುವ ‘ಸ್ವಾತಂತ್ರ್ಯ ವೀರ ಸಾವರ್ಕರ್’ ನಾಮನಿರ್ದೇಶನ ಸಲ್ಲಿಸಿತ್ತು. ಇದೀಗ ಈ ಪಟ್ಟಿ ಬೆಳೆದಿದೆ. ಮಂಗಳವಾರ ಆಸ್ಕರ್ ಸಮಿತಿಯು ಸ್ಪರ್ಧೆಯಲ್ಲಿರುವ ಒಟ್ಟು ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ನಾಲ್ಕು ಹೊಸ ಚಿತ್ರಗಳು ಸೇರ್ಪಡೆಯಾಗಿವೆ. ಸೂರ್ಯ ನಟನೆಯ ತಮಿಳಿನ ‘ಕಂಗುವಾ’, ಪೃಥ್ವಿರಾಜ ಸುಕುಮಾರನ್ ಅವರ ‘ಆಡುಜೀವಿತಂ (ದ ಗೋಟ್ ಲ್ೈ), ಸುಚಿ ತಲಟಿ ನಿರ್ದೇಶನದ ಹಿಂದಿಯ ‘ಗರ್ಲ್ಸ್ ವಿಲ್ ಬಿ ಗರ್ಲ್ಸ್’, ಬಂಗಾಳಿಯ ‘ಪುಟುಲ್’ ಅವಕಾಶ ಪಡೆದಿವೆ. ವಿವಿಧ ದೇಶಗಳ 323 ಚಿತ್ರಗಳು ಸ್ಪರ್ಧೆಯಲ್ಲಿದ್ದು, ಇದರಲ್ಲಿ ‘ಅತ್ಯುತ್ತಮ ಸಿನಿಮಾ’ ವಿಭಾಗಕ್ಕೆ 207 ಚಿತ್ರಗಳು ಸ್ಪರ್ಧಿಸಿವೆ. ಇಂದಿನಿಂದ ವೋಟಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು, ಇದೇ ತಿಂಗಳ 12ಕ್ಕೆ ಮುಕ್ತಾಯವಾಗಲಿದೆ. ಅಂತಿಮ ಪಟ್ಟಿಯನ್ನು 17ರಂದು ಬಿಡುಗಡೆಗೊಳಿಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ.

ಹೆಚ್ಚಿಗೆ ಸಿನಿಮಾ ಸಲ್ಲಿಸಬಹುದು: ಒಂದು ದೇಶದಿಂದ ಏಕಕಾಲಕ್ಕೆ ಎರಡು ಅಥವಾ ಎರಡಕ್ಕಿಂತ ಸಿನಿಮಾಗಳನ್ನು ನಾಮನಿರ್ದೇಶನಕ್ಕೆ ಸಲ್ಲಿಸಬಹುದೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಅದಕ್ಕೆ ಉತ್ತರ ಹೌದು. ಫಿಲಂ ೆಡರೇಷನ್ ಆ್ ಇಂಡಿಯಾದಿಂದ ಅಧಿಕೃತವಾಗಿ ಆಸ್ಕರ್‌ಗೆ ಒಂದು ಚಿತ್ರವನ್ನಷ್ಟೇ ಕಳುಹಿಸಲಾಗುತ್ತದೆ. ಆದರೆ, ಬೇರೆ ಚಿತ್ರತಂಡಗಳು ಸ್ವತಂತ್ರವಾಗಿ ಆಸ್ಕರ್‌ಗೆ ಚಿತ್ರವನ್ನು ಸಲ್ಲಿಸಲು ಅವಕಾಶವಿದೆ. 2022ರಲ್ಲಿ ಭಾರತದಿಂದ ಆಸ್ಕರ್‌ಗೆ ‘ಛೆಲ್ಲೋ ಶೋ’ ಎಂಬ ಗುಜರಾತಿ ಚಿತ್ರವನ್ನು ಆಯ್ಕೆ ಮಾಡಲಾಗಿತ್ತು. ಆಗ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’, ಸಂಜಯ್ ಲೀಲಾ ಬನ್ಸಾಲಿಯ ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರತಂಡಗಳು ಸ್ವತಂತ್ರವಾಗಿ ಆಸ್ಕರ್‌ಗೆ ಅರ್ಜಿ ಸಲ್ಲಿಸಿದ್ದವು. ಆ ವರ್ಷ, ‘ಆರ್‌ಆರ್‌ಆರ್’ನ ‘ನಾಟು... ನಾಟು..’ ಹಾಡಿಗೆ ಅತ್ಯುತ್ತಮ ಸಂಗೀತ ಆಸ್ಕರ್ ಪ್ರಶಸ್ತಿ ಬಂದಿತ್ತು. ಅದೇ ರೀತಿ ಈ ಬಾರಿ ‘ಕಂಗುವಾ’, ‘ಆಡುಜೀವಿತಂ’, ‘ಗರ್ಲ್ಸ್ ವಿಲ್ ಬಿ ಗರ್ಲ್ಸ್’ ಹಾಗೂ ‘ಪುಟುಲ್’ ಚಿತ್ರಗಳು ವಿವಿಧ ವಿಭಾಗದಲ್ಲಿ ನಾಮನಿರ್ದೇಶನ ಸಲ್ಲಿಸಿವೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net