

ಸ್ಟೈಲ್ ಮತ್ತು ಖರ್ಚಿನ ವಿಷಯದಲ್ಲಿ ಬಾಲಿವುಡ್ ನಟಿಯರು ಯಾವತ್ತೂ ಮುಂದು. ಅವರು ತಮ್ಮ ಕಾಸ್ಟ್ಯೂಮ್ಗಳಿಗೆ, ವ್ಯಾನಿಟಿ ಬ್ಯಾಗ್ಗಳಿಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಶೂಗಳಿಗೆ ವಿಪರೀತ ಎನ್ನುವಷ್ಟು ಖರ್ಚು ಮಾಡುತ್ತಾರೆ ಎನ್ನುವುದು ಗೊತ್ತಿಲ್ಲದಿರುವ ವಿಚಾರವೇನಲ್ಲ.
ಇದಕ್ಕೆ ಕಂಗನಾ ಸಹ ಹೊರತಲ್ಲ. ಸಮಾರಂಭಕ್ಕೆ ತಕ್ಕಂತೆ ಕಾಸ್ಟ್ಯೂಮ್ಗಳನ್ನು ತೊಡುವ ಕಂಗನಾ, ಅದಕ್ಕೆಂದೇ ಸಾಕಷ್ಟು ಖರ್ಚು ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಅವರ ಮೇಕಪ್, ಹ್ಯಾಂಡ್ಬ್ಯಾಗ್ಗಳಿಗೂ ಸಾಕಷ್ಟು ಖರ್ಚಾಗುತ್ತದಂತೆ.
ಅದರಲ್ಲೂ ಹ್ಯಾಂಡ್ಬ್ಯಾಗ್ಗಳ ಬಗ್ಗೆ ಕಂಗನಾಗೆ ಸ್ವಲ್ಪ ಜಾಸ್ತಿಯೇ ಆಸೆ ಎಂದು ಹೇಳಲಾಗುತ್ತದೆ. ದೊಡ್ಡ ಕಲೆಕ್ಷನ್ ಇಟ್ಟಿರುವ ಅವರು, ಅಂತಾರಾಷ್ಟ್ರೀಯ ಖ್ಯಾತಿಯ ಹಲವು ಬ್ರಾಂಡ್ನ ಹ್ಯಾಂಡ್ ಬ್ಯಾಗ್ಗಳನ್ನು ಖರೀದಿಸಿ ಇಟ್ಟುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಹರ್ಮ್ಸ್ ಬರ್ಕಿನ್, ಡಿಯಾರ್, ಪ್ರಾಡಾ ಮುಂತಾದ ಜನಪ್ರಿಯ ಬ್ರಾಂಡ್ಗಳ ಬ್ಯಾಗ್ ಖರೀದಿಸುವ ಅವರು, ಅದಕ್ಕೆ ಲಕ್ಷಾಂತರ ಖರ್ಚು ಮಾಡುತ್ತಾರಂತೆ.
ಉದಾಹರಣೆಗೆ, ಈ ಫೋಟೋದಲ್ಲಿರುವ ಕಂಗನಾ ಅವರ ಹ್ಯಾಂಡ್ಬ್ಯಾಗ್ ನೋಡಿ ಅದರ ಬೆಲೆ ಇಷ್ಟು ಎಂದು ಹೇಳಬಲ್ಲಿರಾ? ನಿಜಕ್ಕೂ ಅದರ ಬೆಲೆ ಕೇಳಿದರೆ ಆಶ್ಚರ್ಯವಾಗುತ್ತದೆ. ಅದರ ಬಲೆ 4900 ಡಾಲರ್ಗಳಂತೆ. ರೂಪಾಯಿಗಳ ಲೆಕ್ಕದಲ್ಲಿ 3 ಲಕ್ಷದ 70 ಸಾವಿರದಷ್ಟಾಗುತ್ತದೆ ಎಂದು ರಫ್ ಆಗಿ ಹೇಳಬಹುದು.
ಇಷ್ಟು ದುಡ್ಡಿನಲ್ಲಿ ಒಂದು ಸಣ್ಣ ಕಾರು ಕೊಂಡುಕೊಳ್ಳಬಹುದು. ಇನ್ನೂ ಸ್ವಲ್ಪ ದುಡ್ಡು ಸೇರಿಸಿದರೆ, ಒಂದು ಸೈಟು ಖರೀದಿಸಬಹುದು. ಇಷ್ಟು ಖರ್ಚು ಮಾಡಿ, ಒಂದು ಸಣ್ಣ ಬ್ಯಾಗ್ ಕೊಳ್ಳಬೇಕಾ ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ಕಂಗನಾಗೆ ಹ್ಯಾಂಡ್ ಬ್ಯಾಗ್ಗಳನ್ನು ಖರೀದಿಸುವುದು ಬಹಳ ಇಷ್ಟವಂತೆ. ಹಾಗಾಗಿಯೇ ಲಕ್ಷವಾದರೂ ಪರವಾಗಿಲ್ಲ ಎಂದು ಅವರು ಅಷ್ಟು ಕಾಸ್ಟ್ಲಿ ಬ್ಯಾಗ್ಗಳನ್ನು ಖರೀದಿಸುತ್ತಾರೆ ಎಂಬುದು ವಿಶೇಷ.