ಪೈಲಟ್ ದಿರಿಸಿನಲ್ಲಿ ಕಂಗನಾ ತೇಜಸ್

kangana feb 17 2020
Published on

ಬಾಲಿವುಡ್ ಬೆಡಗಿ ಕಂಗನಾ ರಣಾವತ್ ಈಗ ಪೈಲಟ್ ಆಗಿ ‘ತೇಜಸ್’ನಲ್ಲಿ ಮಿಂಚಲಾರಂಭಿಸಿದ್ದಾರೆ. ಅಂದರೆ, ಅವರ ಮುಂದಿನ ಸಿನಿಮಾ ‘ತೇಜಸ್’ನ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಅವರು ಅದರಲ್ಲಿ ಪೈಲಟ್ ಉಡುಗೆ-ತೊಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ.

ಭಾರತೀಯ ವಾಯುಸೇನೆಯ ಮಹಿಳಾ ಪೈಲಟ್​ನ ಕಥೆಯಾಧಾರಿತ ಈ ಸಿನಿಮಾದ ನಾಯಕಿಯಾಗಿ ಕಂಗನಾ ರಣಾವತ್ ಪೈಲಟ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಯುದ್ಧ ವಿಮಾನವೊಂದರಿಂದ ಇಳಿದ ದಿಟ್ಟ ಮಹಿಳಾ ಪೈಲಟ್ ಲುಕ್​ನಲ್ಲಿ ಕಂಗನಾ ಗಂಭೀರ ಹೆಜ್ಜೆ ಹಾಕುತ್ತ ಬರುವ ದೃಶ್ಯ ಫಸ್ಟ್ ಲುಕ್​ನಲ್ಲಿದೆ. ‘ಸಮವಸ್ತ್ರ ಧರಿಸಿ ಹಗಲಿರುಳೆನ್ನದೆ ದೇಶಕ್ಕಾಗಿ ತ್ಯಾಗ ಮಾಡುತ್ತಿರುವ ಧೈರ್ಯವಂತ ಬಲಿಷ್ಠ ಮಹಿಳೆಯರಿಗಾಗಿ..’ ಎಂಬ ಕ್ಯಾಪ್ಷನ್​ನೊಂದಿಗೆ ಕಂಗನಾ ಕೂಡ ಈ ಫಸ್ಟ್​ಲುಕ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಅದಕ್ಕೆ ಸಿನಿಪ್ರಿಯರು ಹಾಗೂ ಸೇನಾಭಿಮಾನಿಗಳಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ದೊಡ್ಡ ಪ್ರಮಾಣದಲ್ಲಿ ವ್ಯಕ್ತವಾಗುತ್ತಿವೆ.

‘ನಮ್ಮ ದಿಟ್ಟ ಮಹಿಳೆಯರು ಸಮವಸ್ತ್ರ ಧರಿಸಿ ಮಾಡಿದ ತ್ಯಾಗ ಹಲವು ಬಾರಿ ದೇಶದಲ್ಲಿ ಗುರುತಿಸಲ್ಪಡುವುದೇ ಇಲ್ಲ. ‘ತೇಜಸ್’ ಸಿನಿಮಾದಲ್ಲಿ ಅಂಥ ಒಬ್ಬ ಧೀರ ಪೈಲಟ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಈ ಸಿನಿಮಾ ಮೂಲಕ ನಾವು ಇಂದಿನ ಯುವಪೀಳಿಗೆಯಲ್ಲಿ ಒಂದು ಹೆಮ್ಮೆ ಹಾಗೂ ದೇಶಭಕ್ತಿ ಮೂಡಿಸಲಿದ್ದೇವೆ ಎಂದು ಭಾವಿಸಿದ್ದೇನೆ’ ಎಂಬುದಾಗಿ ಕಂಗನಾ ಹೇಳಿಕೊಂಡಿದ್ದಾರೆ. ರಾನಿ ಸ್ಕ್ರ್ಯೂವ್​ವಾಲಾ ನಿರ್ವಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ನಿರ್ದೇಶಕ ಸರ್ವೆಶ್ ಮೇವಾರ ಆಕ್ಷನ್-ಕಟ್ ಹೇಳುತ್ತಿದ್ದಾರೆ. 2021ರ ಏಪ್ರಿಲ್​ನಲ್ಲಿ ಸಿನಿಮಾ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಚಿತ್ರತಂಡ ಕಾರ್ಯೋನ್ಮುಖವಾಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net