

ಬಾಲಿವುಡ್ನ ಹಲವು ಸೆಲೆಬ್ರಿಟಿಗಳ ವಿರುದ್ಧ ಕಂಗನಾ ಈಗಾಗಲೇ ಮಾತಾಡಿದ್ದಾರೆ. ಅವರ ಕಾಲೆಳೆದಿದ್ದಾರೆ. ಈಗ ಅವರು ನೇರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಜಗತ್ತಿನ ಬೆಸ್ಟ್ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.
ಇಷ್ಟಕ್ಕೂ ಕಂಗನಾ, ಮಹಾರಾಷ್ಟ್ರದ ಮುಖ್ಯಮಂತ್ರಿಗಳ ವಿರುದ್ಧ ತಿರುಗಿ ಬಿದ್ದಿರುವುದಕ್ಕೂ ಕಾರಣವಿದೆ. ಇತ್ತೀಚೆಗಷ್ಟೇ ಉದ್ಧವ್ ಠಾಕ್ರೆ ಅವರು, ಸುಶಾಂತ್ ಸಿಂಗ್ ಆತ್ಮಹತ್ಯೆಯ ಕುರಿತು ಮಾತನಾಡಿದ್ದರು. ತಮ್ಮ ಸರ್ಕಾರ ಯಾರ ಪರವಾಗಿಯೂ ಇಲ್ಲ, ಯಾರನ್ನೂ ರಕ್ಷಿಸುತ್ತಲೂ ಇಲ್ಲ, ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ಸಾಕ್ಷಿ ಇದ್ದರೆ ಕೊಡಿ, ತಪ್ಪಿತಸ್ಥರ ವಿರುದ್ಧ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಈ ವಿರುದ್ಧ ಕಂಗನಾ ಮತ್ತು ಅವರ ಪ್ರಚಾರದ ತಂದ ತಿರುಗಿ ಬಿದ್ದಿದೆ. ಟ್ವಿಟರ್ ಮೂಲಕ ಟೀಮ್ ಕಂಗನಾ, ಮಹಾರಾಷ್ಟ್ರದ ಮುಖ್ಯಂತ್ರಿಗಳಿಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಟೀಮ್ ಕಂಗನಾ, 'ಸುಶಾಂತ್ ಅವರ ಫ್ಯಾಮಿಲಿ ಫ್ರೆಂಡ್ ಆಗಿರುವ ಸಮಿತಾ, ಹಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ಸುಶಾಂತ್ಗೆ ಬಾಲಿವುಡ್ನಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿತ್ತಂತೆ. ಹಾಗಾಗಿ ಚಿತ್ರರಂಗ ಬಿಟ್ಟು ಬೇರೇನಾದರೂ ಮಾಡಬೇಕು ಎಂದು ಸುಶಾಂತ್ ಬಯಸುತ್ತಿದ್ದರಂತೆ. ಅಷ್ಟೇ ಅಲ್ಲ, ಯಾರೋ ತನ್ನನ್ನು ಮುಗಿಸುವುದಕ್ಕೆ ಹೊರಟಿದ್ದಾರೆ ಎಂದು ಹೆದರುತ್ತಿದ್ದರಂತೆ. ಆದರೆ, ಜಗತ್ತಿನ ಬೆಸ್ಟ್ ಸಿಎಂ ಮಾತ್ರ ಇದು ಕೊಲೆಯಲ್ಲ, ಆತ್ಮಹತ್ಯೆ ಎಂದು ಎರಡು ನಿಮಿಷದಲ್ಲಿ ಹೇಳಿ ಸುಮ್ಮನಾಗಿದ್ದಾರೆ. ಒಂದು ಕಡೆ ಬಾಲಿವುಡ್ನ ಮಾಫಿಯಾದವರು ಈ ಕೇಸ್ ಮುಚ್ಚಿ ಹಾಕುವುದಕ್ಕೆ ಪ್ರಯತ್ನಿಸುತ್ತಿದ್ದರೆ, ಮುಖ್ಯಮಂತ್ರಿಗಳು ಮಾತ್ರ ನಮಗೆ ಸಾಕ್ಷಿ ಕೊಡಿ ಎಂದು ಹೇಳುತ್ತಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ಈ ವಿಷಯದಲ್ಲಿ ಇನ್ನಷ್ಟು ಹರಿಹಾಯ್ದಿರುವ ಕಂಗನಾ ಅವರ ಟೀಮ್, 'ಜಗತ್ತಿನ ಬೆಸ್ಟ್ ಸಿಎಂ ಅವರು ಪ್ರೂಫ್ ಕೊಡಿ ಎಂದು ಕೇಳುತ್ತಿದ್ದಾರೆ. ಈಗ ಜನತೆ ಅವರಿಗೆ ಸಾಕ್ಷಿ ಒದಗಿಸಬೇಕಾಗಿದೆ. ಏಕೆಂದರೆ, ಮುಂಬೈ ಪೊಲೀಸ್ ಈ ಕುರಿತು ತನಿಖೆ ಪ್ರಾರಂಭಿಸಿದಾಗ, ಕ್ರೈಮ್ ಸೈಟ್ ಸೀಲ್ ಮಾಡುವ ಪ್ರಯತ್ನ ಮಾಡಲಿಲ್ಲ. ಫಿಂಗರ್ ಪ್ರಿಂಟ್ಗಳನ್ನು ಕಲೆ ಹಾಕುವುದಕ್ಕೆ ಪ್ರಯತ್ನಿಸಿಲಿಲ್ಲ. ಯಾಕೆ ಎಂದು ಅವರನ್ನು ಕೇಳುವುದು ಬಿಟ್ಟು ಬಾಲಿವುಡ್ ಮಾಫಿಯಾದ ಅತ್ಯುತ್ತಮ ಮುಖ್ಯಮಂತ್ರಿಗಳು ಬೇರೆಯವರನ್ನು ಸಾಕ್ಷಿ ಕೇಳುತ್ತಿದ್ದಾರೆ' ಎಂದು ಆರೋಪಿಸಿದೆ.