ಕುಟುಂಬದವರಿಗೆ ಗುಡ್​ ನ್ಯೂಸ್​ ಕೊಟ್ಟ ಕಂಗನಾ ರಣಾವತ್​; ಸಹೋದರ-ಸಹೋದರಿಯರ ಕನಸು ನನಸು

kangana
Published on

ಚಂಡೀಗಢ: ಸದಾ ಸುದ್ದಿಯಲ್ಲಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಇದೀಗ ತನ್ನ ಕುಟುಂಬ ವರ್ಗದವರಿಗೆ ಗುಡ್​ ನ್ಯೂಸ್​ ಒಂದನ್ನು ಕೊಟ್ಟಿದ್ದಾರೆ. ತನ್ನ ಸಹೋದರ ಸಹೋದರಿಯರಿಗೆ ನಾಲ್ಕು ಕೋಟಿ ರೂಪಾಯಿ ಮೌಲ್ಯದ ನಾಲ್ಕು ಫ್ಲಾಟ್​ಗಳನ್ನು ಉಡುಗೊರೆಯಾಗಿ ಕೊಟ್ಟು, ಅವರ ಕನಸನ್ನು ನನಸು ಮಾಡಿದ್ದಾರೆ.

ಚಂಡೀಗಢದ ವಿಮಾನ ನಿಲ್ದಾಣಕ್ಕೆ ಹತ್ತಿರದ ಸ್ಥಳದಲ್ಲಿನ ಅಪಾರ್ಟ್​ಮೆಂಟ್​ನಲ್ಲಿ ಫ್ಲಾಟ್​ಗಳನ್ನು ಕೊಡಿಸಲಾಗಿದೆ. ಅತ್ಯಂತ ಪ್ರಶಾಂತ ಸ್ಥಳದಲ್ಲಿ ಇರುವ ಈ ಅಪಾರ್ಟ್​ಮೆಂಟ್​ ನೋಡುವುದಕ್ಕೆ ರಾಯಲ್​ ಲುಕ್​ ಕೊಡುವಂಯಿದೆಯಂತೆ. ಈ ಫ್ಲಾಟ್​ಗಳನ್ನು ಪ್ರೀತಿಯ ಸಹೋದರಿ ರಂಗೋಲಿ ಚಾಂದೆಲ್​, ಸಹೋದರ ಅಕ್ಷತ್​ ಹಾಗೂ ಇನ್ನಿಬ್ಬರಿಗೆ ಕೊಡಲಾಗಿದೆ.

ಕಂಗನಾ ಯಾವಾಗಲೂ ಬೇರೆಯವರ ಸುಖ ಬಯಸುವ ಹುಡುಗಿ. ಮೊದಲನಿಂದಲೂ ಕುಟುಂಬಕ್ಕೆ ನೆರವಾಗುತ್ತಾ ಬಂದಿದ್ದಾಳೆ. ಇದೀಗ ಈ ರೀತಿ ಫ್ಲಾಟ್​ ಕೊಡಿಸುವ ಮೂಲಕ ನಾಲ್ಕು ಜನರ ಕನಸನ್ನು ನನಸು ಮಾಡಿದ್ದಾಳೆ ಎನ್ನುತ್ತಾರೆ ಆಕೆಯ ಕುಟುಂಬಸ್ಥರು.

ಈ ವಿಚಾರವನ್ನು ಕಂಗನಾ ರಣಾವತ್​ ಕೂಡ ಹಂಚಿಕೊಂಡಿದ್ದಾರೆ. ಕುಟುಂಬದ ಜತೆ ಸುಖ ದುಃಖವನ್ನು ಹಂಚಿಕೊಳ್ಳುವುದನ್ನು ನಾನು ಇಷ್ಟಪಡುತ್ತೇನೆ. ಖುಷಿಯನ್ನು ಹಂಚಿಕೊಂಡರೆ ಅದು ದುಪ್ಪಟ್ಟಾಗುತ್ತದೆ. ಈ ಅಪಾರ್ಟ್​ಮೆಂಟ್​ಗಳು 2023ಕ್ಕೆ ಸಿದ್ಧವಿರಲಿವೆ. ಅದನ್ನು ಕುಟುಂಬಸ್ಥರಿಗೆ ಕೊಡಲು ಶಕ್ತಿ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಆಕೆ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net