'ಮುಂಬೈನಲ್ಲಿ ಇದೇನಿದು ಗೂಂಡಾ ರಾಜ್, ಅಸಮರ್ಥ ಸಿಎಂ ಮತ್ತವರ ತಂಡವನ್ನು ಪ್ರಶ್ನಿಸುವವರು ಯಾರೂ ಇಲ್ಲವೇ?'

Kangana Ranaut 29
Published on

ಮುಂಬೈ: ನಟಿ ಕಂಗನಾ ರಣಾವತ್​ ಮತ್ತು ಮುಂಬೈ ಸರ್ಕಾರದ ವಿರುದ್ಧ ಜಿದ್ದಾಜಿದ್ದಿ ನಡೆಯುತ್ತಿರುವುದು ಹಳೇ ವಿಚಾರ.

ಸುಶಾಂತ್​ ಸಿಂಗ್​ ಸಾವು, ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಂಗನಾ, ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪುತ್ರನ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು. ಕಂಗನಾ ಅವರ ಮುಂಬೈ ಕಚೇರಿಯನ್ನು ಮಹಾ ಸರ್ಕಾರ ಧ್ವಂಸ ಮಾಡಿಸಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.

ಈ ಮಧ್ಯೆ ನಟಿ ಕಂಗನಾ ಈಗ ಮತ್ತೊಮ್ಮೆ ಮಹಾರಾಷ್ಟ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಕಂಗನಾ ಟಾರ್ಗೆಟ್​ ಮಾಡಲು ಕಾರಣ ಹರಿಯಾಣದ ಯೂಟ್ಯೂಬರ್​ ಸಾಹಿಲ್ ಚೌಧರಿಯವರ ಬಂಧನ. ಇದನ್ನೂ ಓದಿ: ಶಾಲೆ ಪ್ರಾರಂಭವಾಗುವುದು ತಡವಾದಷ್ಟೂ ಬಾಲ್ಯ ವಿವಾಹಗಳು ಹೆಚ್ಚಾಗುತ್ತವೆ…!

ಸಾಹಿಲ್​ ಚೌಧರಿಯವರು ತಮ್ಮ ಯೂಟ್ಯೂಬ್ ಮೂಲಕ ಸುಶಾಂತ್​ ಸಿಂಗ್​ ಸಾವಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಾದ ಮೇಲೆ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.  ಸಾಹಿಲ್​ರನ್ನು ಬಂಧಿಸಿದ ಮುಂಬೈ ಪೊಲೀಸರ ಕ್ರಮವನ್ನು ಖಂಡಿಸಿ ಟ್ವೀಟ್​ ಮಾಡಿದ ಕಂಗನಾ ರಣಾವತ್​, ಮುಂಬೈ ಒಂದು ಗೂಂಡಾ ನಗರವಾಗಿದೆ. ಇಲ್ಲಿ ಗೂಂಡಾಗಳ ಆಡಳಿತ ನಡೆಯುತ್ತಿದೆ. ಅದರಲ್ಲೂ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಯವರಂತೂ ಜಗತ್ತಿನಲ್ಲಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವರ್ಗಾವಣೆಗೆ ಕಾರಣವಾಯ್ತಾ ಸಿಎಂ ಬಿಎಸ್​ವೈ ತಿರುಪತಿ ಭೇಟಿ..?!

ಮುಂಬೈ ಒಂದು ಗೂಂಡಾ ಸಿಟಿಯಾಗುತ್ತಿದೆ. ಇಲ್ಲಿರುವ ಜಗತ್ತಿನ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಮತ್ತು ಅವರ ತಂಡವನ್ನು ಯಾರೂ ಪ್ರಶ್ನೆ ಮಾಡುವಂತೆಯೇ ಇಲ್ಲ. ಇವರು ನಮಗೆ ಏನು ಮಾಡಬಹುದು? ನಮ್ಮ ಮನೆಗಳನ್ನು ಮುರಿದು, ನಮ್ಮನ್ನು ಕೊಲ್ಲುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಟ್ವೀಟ್​ನಲ್ಲಿ ಕಾಂಗ್ರೆಸ್​ ಅಕೌಂಟ್​​ನ್ನು ಟ್ಯಾಗ್ ಮಾಡಿ, ನಮ್ಮ ಪ್ರಶ್ನೆಗೆ ಯಾರು ಉತ್ತರಿಸುತ್ತಾರೆ ಎಂದೂ ಕೇಳಿದ್ದಾರೆ. ನಾನು ಸಾಹಿಲ್ ಚೌಧರಿ ಪರ ನಿಲ್ಲುತ್ತೇನೆ(#istandwithsaahilchoudhary) ಎಂದೂ ಹೇಳಿದ್ದಾರೆ.

ಸಾಹಿಲ್​ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು. ಸರ್ಕಾರದ ಕ್ರಮ, ಕಾರ್ಯವೈಖರಿಯನ್ನು ಪ್ರಶ್ನಿಸುವ ಹಕ್ಕನ್ನು ನಮಗೆ ಪ್ರಜಾಪ್ರಭುತ್ವ ಕೊಟ್ಟಿದೆ. ಅದನ್ನೇ ಮಾಡಿದ ಸಾಹಹಿಲ್​ಗೆ ಈಗ ಜೈಲು ಶಿಕ್ಷೆ ಸಿಕ್ಕಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net