

ಮುಂಬೈ: ಕಂಗನಾ ರಣಾವತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜೀವನದ ಸುತ್ತ ಸುತ್ತುವ ಈ ಸಿನಿಮಾ ಇದೇ ವರ್ಷದ ಜೂನ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಸಿನಿಮಾದ ಟೀಸರ್ ನ್ನು ಟ್ವೀಟರ್ ನಲ್ಲಿ ಕಂಗನಾ ಹಂಚಿಕೊಂಡಿದ್ದಾರೆ. ಇಂದಿರಾಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ 48 ವರ್ಷಗಳ ನಂತರ ಅದೇ ದಿನದಂದು ಈ ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.ಈ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸಿಕೊಂಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2023ರ ನವೆಂಬರ್ 14 ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆ ಸಿನಿಮಾ ಬದಲು ಕಂಗನಾ ಅವರ ತೇಜಸ್ ಸಿನಿಮಾ ತೆರೆ ಕಂಡಿತ್ತು.
ಮಣಿಕರ್ಣಿಕಾ ಚಿತ್ರದ ಬಳಿಕ ಕಂಗನಾ ನಿರ್ದೇಶನದ ಎರಡನೇ ಚಿತ್ರ ಎಮರ್ಜೆನ್ಸಿ ಆಗಿದೆ. ಈಗಾಗಲೇ ಸಿನಿಮಾ ಟೀಸರ್ ಪ್ರೇಕ್ಷಕರ ಮನಗೆದ್ದಿದೆ.
ಕಂಗನಾ ರಣಾವತ್ ಅವರ ಮುಂದಿನ ಚಿತ್ರ 'ಎಮರ್ಜೆನ್ಸಿ' ಜೂನ್ 14, 2024 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ. ನಟ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಂತೆ ಕಾಣಿಸಿಕೊಂಡಿರುವ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
“ಭಾರತದ ಕರಾಳ ಗಂಟೆಯ ಹಿಂದಿನ ಕಥೆಯನ್ನು ಅನ್ಲಾಕ್ ಮಾಡಿ. 14ನೇ ಜೂನ್ 2024 ರಂದು ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುತ್ತಿದೆ. ಸಾಕ್ಷಿಗಳ ಇತಿಹಾಸವು ಅತ್ಯಂತ ಭಯಭೀತ ಮತ್ತು ಉಗ್ರ ಪ್ರಧಾನ ಮಂತ್ರಿಯಾಗಿ ಜೀವಂತವಾಗಿದೆ. ಇಂದಿರಾ ಗಾಂಧಿ ಚಿತ್ರಮಂದಿರಗಳಲ್ಲಿ ಗುಡುಗಿದರು. 14 ಜೂನ್ 2024 ರಂದು ಚಿತ್ರಮಂದಿರಗಳಲ್ಲಿ ತುರ್ತು ಪರಿಸ್ಥಿತಿ ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದಿದುಕೊಂಡಿದ್ದಾರೆ.
ಜಯಪ್ರಕಾಶ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್, ಜಗಜೀವನ್ ರಾಮ್ ಪಾತ್ರದಲ್ಲಿ ನಟ ಸತೀಶ್ ನಟಿಸಿದ್ದು ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರಕ್ಕೆ ನಟ ಶ್ರೇಯಸ್ ತಲ್ಪಾಡೆ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಪಾತ್ರದಲ್ಲಿ ಮಿಲಿಂದ್ ಸೋಮನ್ ಕಾಣಿಸಿಕೊಳ್ಳಲಿದ್ದಾರೆ.