'ಮದುವೆಯಾಗಿ ಒಂದು ತಿಂಗಳ ಸಂಭ್ರಮಕ್ಕೆ ರೊಮ್ಯಾಂಟಿಕ್​ ಫೋಟೋ ಪೋಸ್ಟ್​...ಜೋಡಿಯ ಹಾಟ್​ ಲಿಪ್​ಲಾಕ್​ಗೆ ನೆಟ್ಟಿಗರು ಫಿದಾ...'

Kamya 10 March 20
Published on

ಮುಂಬೈ: ಬಾಲಿವುಡ್​ನ ಖ್ಯಾತ ಕಿರುತೆರೆ ನಟಿ, ಬಿಗ್​ ಬಾಸ್​ ಸ್ಪರ್ಧಿ ಕಾಮ್ಯಾ ಪಂಜಾಬಿ ಫೆ.10ರಂದು ಪ್ರಿಯತಮ ಶಲಭ್​ ಡಂಗ್​ ಜತೆ ಸಪ್ತಪದಿ ತುಳಿದಿದ್ದಾರೆ.

ಕಾಮ್ಯಾ ಪಂಜಾಬಿಯವರಿಗೆ ಇದು ಎರಡನೇ ವಿವಾಹ. ಈ ಮೊದಲು ಉದ್ಯಮಿ ಬಂಟಿ ನೇಗಿ ಎಂಬುವರನ್ನು ವರಿಸಿದ್ದರು. 10ವರ್ಷದ ಮಗಳೂ ಇದ್ದಾಳೆ. ಅವರಿಗೆ ವಿಚ್ಚೇದನ ನೀಡಿದ್ದ 40ವರ್ಷದ ಕಾಮ್ಯಾ 2019ರ ಫೆಬ್ರವರಿಯಲ್ಲಿ ಶಲಭ್ ಅವರನ್ನು ಭೇಟಿಯಾಗಿದ್ದರು. ಅವರ ಪರಿಚಯ ಪ್ರೇಮಕ್ಕೆ ತಿರಗಿ, ಪರಸ್ಪರ ಮೆಚ್ಚಿ ಈ ಬಾರಿಯ ಫೆಬ್ರವರಿಯಲ್ಲಿ ವಿವಾಹವಾಗಿದ್ದಾರೆ. ಈ ಜೋಡಿಯ ಅದ್ದೂರಿ ಮದುವೆಗೆ ಹಲವು ಪ್ರಸಿದ್ಧ ಬಾಲಿವುಡ್​ ಸೆಲೆಬ್ರಿಟಿಗಳು ಆಗಮಿಸಿದ್ದರು.

ಈಗ ಅವರ ಒಂದನೇ ತಿಂಗಳ ಮದುವೆ ಸಂಭ್ರಮಕ್ಕೆ ಬಣ್ಣಗಳ ಹಬ್ಬ ಹೋಳಿ ಕೂಡ ಜತೆಯಾಗಿದ್ದು ದಂಪತಿಯ ಖುಷಿಯನ್ನು ಡಬಲ್​ ಮಾಡಿದೆ. ಇದೇ ಸಂತೋಷದಲ್ಲಿ ಕಾಮ್ಯಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪತಿಯೊಂದಿಗಿನ ರೊಮ್ಯಾಂಟಿಕ್​ ಸನ್ನಿವೇಶದ ಫೋಟೋ ಪೋಸ್ಟ್ ಮಾಡಿಕೊಂಡಿದ್ದಾರೆ.

ಪತಿ ಶಲಭ್​ರೊಂದಿಗೆ ಲಿಪ್​ ಲಾಕ್​ ಮಾಡುತ್ತಿರುವ ಸಖತ್​ ಬ್ಯೂಟಿಫುಲ್​ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಕಾಮ್ಯಾ, ನಾನು ಇಷ್ಟು ಅದೃಷ್ಟವಂತಳು ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ನಮಗಿರಬ್ಬರಿಗೂ ಮದುವೆಯಾಗಿ ಒಂದು ತಿಂಗಳ ಸಂಭ್ರಮದ ಶುಭಾಶಯಗಳು. ಶಲಭ್​ ಐ ಲವ್​ ಯೂ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಅವರಿಬ್ಬರ ಕ್ಯೂಟ್ ಫೋಟೋಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಇಬ್ಬರಿಗೂ ಹಾರೈಸಿದ್ದಾರೆ. 

ಹಾಗೇ ಅವರಿಬ್ಬರೂ ಹೋಳಿ ಆಡಿದ ಎರಡು ಫೋಟೋಗಳನ್ನು ಪೋಸ್ಟ್ ಮಾಡಿ, ಎಲ್ಲರಿಗೂ ಹೋಳಿ ಹಬ್ಬದ ವಿಶಸ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net