ಕಂಬಳ ರಾಕಿಬಾಯ್ ಕಥೆ ತೆರೆ ಮೇಲೆ

kambala feb 19 2020
Published on

ಬೆಂಗಳೂರು: ಇತ್ತೀಚೆಗೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಕಂಬಳ ಸದ್ಯದಲ್ಲೇ ತೆರೆಯ ಮೇಲೂ ಮೂಡಿಬರಲಿದೆ. ಹೌದು..

ಕ್ರೀಡಾಪಟು ಉಸೇನ್ ಬೋಲ್ಟ್​ಗೂ ಮೀರಿದ ವೇಗದಲ್ಲಿ ಕಂಬಳದ ಗದ್ದೆಯಲ್ಲಿ ಓಡಿದ ಶ್ರೀನಿವಾಸ ಗೌಡ ಹಾಗೂ ನಿಶಾಂತ್ ಶೆಟ್ಟಿ ಅವರ ಸ್ಪೂರ್ತಿಯಿಂದ ಈಗ ಕಂಬಳ ಕುರಿತ ಸಿನಿಮಾ ನಿರ್ವಣವಾಗಲಿದೆ. ‘ಲೆಮನ್ ಗ್ರಾಸ್ ಸ್ಟುಡಿಯೋಸ್’ ಬ್ಯಾನರ್​ನಲ್ಲಿ ಕರಾವಳಿಯ ಲೋಕೇಶ್ ಶೆಟ್ಟಿ ಅವರು ಈ ಚಿತ್ರ ನಿರ್ವಣಕ್ಕೆ ಮುಂದಾಗಿದ್ದು, ಈಗಾಗಲೇ ಶೀರ್ಷಿಕೆ ಕೂಡ ನೋಂದಾಯಿಸಿಕೊಂಡಿದ್ದಾರೆ.

‘ಕಂಬಳದ ಸಂಸ್ಕೃತಿ, ಅದರ ಹಿರಿಮೆ ಆಧಾರಿತ ಕಥೆಯನ್ನೇ ಸಿನಿಮಾ ಮಾಡಲಾಗುವುದು. ಈಗಾಗಲೇ ಕಂಬಳ ಓಟದ ಮೂಲಕ ಜಗತ್ಪ್ರಸಿದ್ಧರಾಗಿರುವ ಶ್ರೀನಿವಾಸ್ ಗೌಡ, ನಿಶಾಂತ್ ಶೆಟ್ಟಿ ಸೇರಿ ಕಂಬಳದಲ್ಲಿ ಓಡುವ ಬಹುತೇಕ ಎಲ್ಲರೂ ಇದರಲ್ಲಿ ನಟಿಸಲಿದ್ದಾರೆ. ಇಲ್ಲಿ ಕಥೆ, ಕಂಬಳ, ಕೋಣಗಳೇ ಹೀರೋ. ಆದರೂ ಅದ್ದೂರಿ ತಾರಾಗಣ ಇರಲಿದೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ, ರಾಹುಲ್ ದೇವ್ ಮುಂತಾದವರನ್ನೂ ಪಾತ್ರವರ್ಗದಲ್ಲಿ ಹಾಕಿಕೊಳ್ಳುವ ಚಿಂತನೆ ಇದೆ’ ಎಂದು ಲೋಕೇಶ್ ಶೆಟ್ಟಿ ತಿಳಿಸಿದ್ದಾರೆ. ‘ಚಿತ್ರಕ್ಕೆ ನಿಖಿಲ್ ಮಂಜು ನಿರ್ದೇಶನ ಮಾಡಲಿದ್ದು, ಕನ್ನಡ, ತುಳು ಎರಡೂ ಭಾಷೆಗಳಲ್ಲಿ ಈ ಸಿನಿಮಾ ನಿರ್ವಣವಾಗಲಿದೆ. ತಾರಾಗಣದ ಬಗ್ಗೆ ಮಾತುಕತೆ ನಡೆದಿದ್ದು, ಅಧಿಕೃತವಾಗುವುದಷ್ಟೇ ಬಾಕಿ ಇದೆ. ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡ ಲಾಗುವುದು’ ಎಂದು ನಿರ್ವಪಕರು ತಿಳಿಸಿದ್ದಾರೆ.

‘ಕಂಬಳ’ ಎಂಬ ಟೈಟಲ್ ನೋಂದಣಿ ಮಾಡಿಕೊಂಡಿದ್ದು, ಅದಕ್ಕೆ ‘ರಾಕಿಬಾಯ್’ ಎಂಬ ಟ್ಯಾಗ್​ಲೈನ್ ನೀಡಲಾಗಿದೆ. ಸ್ಟಾರ್ ನಟರನ್ನೇ ಹಾಕಿಕೊಂಡು ಈ ಸಿನಿಮಾ ಮಾಡಲಿದ್ದು, ಮಾರ್ಚ್​ನಿಂದ ಶೂಟಿಂಗ್ ಆರಂಭವಾಗಲಿದೆ. | ಲೋಕೇಶ್ ಶೆಟ್ಟಿ ನಿರ್ಮಾಪಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net