ಎಸ್​​.ಪಿ.ಬಾಲಸುಬ್ರಹ್ಮಣ್ಯಂಗೆ ತೀವ್ರ ಅನಾರೋಗ್ಯ; ಆಸ್ಪತ್ರೆಗೆ ದೌಡಾಯಿಸಿದ ನಟ ಕಮಲ್​ ಹಾಸನ್​..

SPb
Published on

ಚೆನ್ನೈ: ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಇಂದು ತೀವ್ರ ಹದಗೆಟ್ಟಿದ್ದಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆ ತಿಳಿಸಿದೆ.

ಎಸ್​ಪಿಬಿ ಆಸ್ಪತ್ರೆಗೆ ದಾಖಲಾಗಿ ಒಂದು ತಿಂಗಳ ಮೇಲಾಯಿತು. ಕರೊನಾ ನೆಗೆಟಿವ್​ ಬಂದಿದ್ದರೂ ಶ್ವಾಸಕೋಶ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಈ ಮಧ್ಯೆ ಸ್ವಲ್ಪ ಚೇತರಿಸಿಕೊಂಡಿದ್ದ ಗಾಯಕನ ಆರೋಗ್ಯ ಇಂದು ಮತ್ತೆ ಹದಗೆಟ್ಟಿದೆ.

ಎಸ್​​ಪಿಬಿ ಆರೋಗ್ಯಕ್ಕಾಗಿ ಚಿತ್ರೋದ್ಯಮ, ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಈ ಮಧ್ಯೆ ನಟ, ರಾಜಕಾರಣಿ ಕಮಲ್​ ಹಾಸನ್​ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ತೆರಳಿದ್ದಾರೆ. ಎಸ್​.ಪಿ.ಚರಣ್​ ಅವರು ತಮ್ಮ ತಂದೆಯ ಆರೋಗ್ಯ ಹದಗೆಟ್ಟಿರುವ ವಿಷಯವನ್ನು ಕಮಲ್​ ಹಾಸನ್​ಗೆ ತಿಳಿಸಿದ್ದಾರೆ. ಕೂಡಲೇ ಕಮಲ್​ ಹಾಸನ್​ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಅವರು ಆಸ್ಪತ್ರೆಗೆ ಭೇಟಿ ನೀಡಿದ ವಿಡಿಯೋ ಕೂಡ ವೈರಲ್​ ಆಗಿದೆ.

ಇನ್ನೂ ಅನೇಕ ಗಣ್ಯರು ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net