ಹಾರರ್ ಚಿತ್ರದೊಂದಿಗೆ ಕಾಜಲ್ ಅಗರವಾಲ್ ಕಂಬ್ಯಾಕ್

Kajal (6)
Published on

ಗೌತಮ್ ಕಿಚ್ಲು ಜತೆಗೆ ಮದುವೆಯ ನಂತರ ಕಾಜಲ್ ಹೊಸ ಚಿತ್ರದೊಂದಿಗೆ ಕಂಬ್ಯಾಕ್ ಮಾಡುತ್ತಿದ್ದಾರೆ ಮತ್ತು ಈ ಬಾರಿ ಅವರು ಹಾರರ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬುದು ಕಳೆದ ವರ್ಷದ ಸುದ್ದಿ.

ಹೊಸ ವಿಷಯವೇನೆಂದರೆ, ಈ ಚಿತ್ರ ಈಗಾಗಲೇ ಪ್ರಾರಂಭವಾಗಿದ್ದು, ಇದರಲ್ಲಿ ಕಾಜಲ್, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು. ಇದುವರೆಗೂ ಬಬ್ಲಿಬಬ್ಲಿ ಪಾತ್ರಗಳನ್ನೇ ಹೆಚ್ಚಾಗಿ ಮಾಡಿಕೊಂಡು ಬಂದಿದ್ದ ಕಾಜಲ್, ಇದೇ ಮೊದಲ ಬಾರಿಗೆ ರಫ್ ಆಂಡ್ ಟಫ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಚಿತ್ರದಲ್ಲಿ ಅವರಿಗೆ ಒಂದಿಷ್ಟು ಸಾಹಸ ದೃಶ್ಯಗಳೂ ಇದ್ದು, ಅದಕ್ಕಾಗಿ ಅವರು ಸಾಹಸ ನಿರ್ದೇಶಕ ಜಗನ್ ಬಳಿ ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರಂತೆ.

‘ಘೋಸ್ಟ್​ಲಿ’ ಎಂಬ ಹೆಸರಿನ ಈ ಹಾರರ್-ಕಾಮಿಡಿ ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರ ದಂಡೇ ನಟಿಸುತ್ತಿದೆ. ಯೋಗಿ ಬಾಬು, ಊರ್ವಶಿ, ಸಂತಾನಭಾರತಿ, ಮೊಟ್ಟೆ ರಾಜೇಂದ್ರನ್ ಮುಂತಾದವರು ಈ ಚಿತ್ರದಲ್ಲಿದ್ದಾರೆ. ‘ಗುಲೇಬಕಾವಲಿ’ ಮತ್ತು ‘ಜಾಕ್​ಪಾಟ್’ ಚಿತ್ರಗಳನ್ನು ನಿರ್ದೇಶಿಸಿದ್ದ ಜಗನ್ ನಿರ್ದೇಶನ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net