ವೆಬ್​ಸರಣಿಗಾಗಿ ಕಾಜಲ್ ಬೋಲ್ಡ್ ಅವತಾರ!

Kajjal
Published on

ಕಾಜಲ್ ಅಗರ್​ವಾಲ್ ಲಾಕ್​ಡೌನ್ ಹೊತ್ತಲ್ಲೂ ಹಲವು ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ‘ಆಚಾರ್ಯ’ ಸಿನಿಮಾ ಸೇರಿ ಬೇರೆ ಬೇರೆ ಸಿನಿಮಾ ಸಂಬಂಧಿ ಚರ್ಚೆಯಲ್ಲಿದ್ದಾರೆ. ಇವೆಲ್ಲದರ ನಡುವೆ ಹೆಚ್ಚು ಚರ್ಚೆಯಲ್ಲಿ ಇರುವುದು ವೆಬ್ ಸಿರೀಸ್ ವಿಚಾರವಾಗಿ. ಈಗಾಗಲೇ ದಕ್ಷಿಣ ಭಾರತದ ಮತ್ತು ಬಾಲಿವುಡ್​ನ ಹಲವು ಸೆಇನಿಮಾಗಳಲ್ಲಿ ನಟಿಸಿರುವ ಕಾಜಲ್, ಚೊಚ್ಚಲ ವೆಬ್ ಸಿರೀಸ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಚ್ಚರಿ ವಿಚಾರ ಏನೆಂದರೆ, ಅ ವೆಬ್ ಸಿರೀಸ್ ಹಾಲಿವುಡ್​ನಲ್ಲಿ ಸಿದ್ಧವಾಗಿದ್ದ ‘ಕ್ವಾಂಟಿಕೋ’ದ ರಿಮೇಕ್ ಎನ್ನಲಾಗುತ್ತಿದೆ. ಮೂಲ ವೆಬ್​ಸಿರೀಸ್​ನಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಚೂರು ಹೆಚ್ಚೇ ಬೋಲ್ಡ್ ಅವತಾರದಲ್ಲಿ ಅವರು ಎದುರಾಗಿದ್ದರು. ಇದೀಗ ಕಾಜಲ್ ಸಹ ಬೋಲ್ಡ್ ಲುಕ್​ನಲ್ಲಿ ಎದುರುಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಆ ಸಿರೀಸ್ ನೋಡಿ ಇಷ್ಟಪಟ್ಟಿರುವ ಅವರು, ನಟಿಸುವುದಕ್ಕೆ ಸೈ ಎಂದಿದ್ದಾರಂತೆ. ಈ ಹೈ ಬಜೆಟ್ ವೆಬ್​ಸಿರೀಸ್​ಗೆ ನೆಟ್​ಫ್ಲಿಕ್ಸ್ ಬಂಡವಾಳ ಹೂಡುತ್ತಿದ್ದು, ಶೀಘ್ರದಲ್ಲಿ ವೆಬ್​ಸಿರೀಸ್​ನ ನಿರ್ದೇಶಕರ್ಯಾರು, ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಮಾಹಿತಿ ಸಹ ಬಹಿರಂಗವಾಗಲಿದೆಯಂತೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net