25ಕ್ಕೆ ‘ಸ್ವಪ್ನಮಂಟಪ’ ರಿಲೀಸ್ : ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಚಿತ್ರ

swapna mantapa
Published on

ಬೆಂಗಳೂರು: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ, ವಿಜಯ್ ರಾಘವೇಂದ್ರ ಹಾಗೂ ‘ಕನ್ನಡತಿ’ ಖ್ಯಾತಿ ರಂಜಿನಿ ರಾಘವನ್ ಮುಖ್ಯಭೂಮಿಕೆಯಲ್ಲಿರುವ ‘ಸ್ವಪ್ನಮಂಟಪ’ ಚಿತ್ರವು ರಿಲೀಸ್ ಸಿದ್ಧವಾಗಿದೆ. ಈಗಾಗಲೇ ಬೆಂಗಳೂರು ಸೇರಿ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಪ್ರೇಕ್ಷಕರ ಮುಂದೆ ಬರಲು ಸಿದ್ಧತೆ ನಡೆಸಿದ್ದು, ಇದೇ ತಿಂಗಳ 25ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಬರಗೂರು ರಾಮಚಂದ್ರಪ್ಪ ರಚಿಸಿರುವ ಅದೇ ಹೆಸರಿನ ಕಾದಂಬರಿ ಆಧಾರಿತ ಸಿನಿಮಾ ಇದಾಗಿದೆ. ರಾಜನೊಬ್ಬ ನಿರ್ಮಿಸಿದ ಸ್ವಪ್ನಮಂಟಪವನ್ನು ಕೆಲವರು ಕೆಡವಿ, ಅನ್ಯ ಕಾರ್ಯಗಳಿಗೆ ಬಳಸಲು ಯತ್ನಿಸಿದಾಗ ಆಗ ಚಿತ್ರದ ನಾಯಕ-ನಾಯಕಿ ಹೇಗೆ ಜಾಗೃತಿ ಮೂಡಿಸಿ, ಆ ಪಾರಂಪಾರಿಕ ಸ್ಥಳವನ್ನು ಉಳಿಸುತ್ತಾರೆ ಎಂಬುದೇ ಚಿತ್ರದ ಕಥೆ. ಪಾರಂಪಾರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಸುಂದರ್ ರಾಜ್, ಶೋಭಾ ರಾಘವೇಂದ್ರ, ರಜನಿ, ಸುಂದರರಾಜು ಅರಸು, ಅಂಬರೀಶ್ ಸಾರಂಗಿ, ರಾಜಪ್ಪ ದಳವಾಯಿ, ವೆಂಕಟರಾಜು, ಉಮ್ಮತ್ತೂರು ಬಸವರಾಜು ಕಲಾಬಳಗದಲ್ಲಿದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ ಅದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ, ಹೊಸ್ಮನೆ ಮೂರ್ತಿ ಕಲಾ ವಿನ್ಯಾಸ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net