ದೊಡ್ಡ ಬ್ರ್ಯಾಂಡ್​​​ಗೆ ರಾಯಭಾರಿಯಾದ ಜೂ. NTR; ನಟಿಯರಿಗೆ ಸೆಡ್ಡು!

junior ntr
Published on

ತೆಲಂಗಾಣ: ಆರ್​ಆರ್​ಆರ್(RRR)​ ಚಿತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ಟಾಲಿವುಡ್ ಸ್ಟಾರ್ ನಟ ಜೂ. ಎನ್​ಟಿಆರ್(Jr.NTR)​ ಇದೀಗ ದೊಡ್ಡ ಸಂಸ್ಥೆಯೊಂದಕ್ಕೆ ರಾಯಭಾರಿಯಾಗಿದ್ದಾರೆ.

ಪ್ಯಾನ್ ಇಂಡಿಯಾ(Pan India) ಸಿನಿಮಾಗಳಲ್ಲಿ ಹೆಚ್ಚು ಅಭಿನಯಿಸುವ ಮೂಲಕ ಚಿತ್ರರಸಿಕರನ್ನು ಮನರಂಜಿಸುವ ನಟ ಜೂ. ಎನ್​ಟಿಆರ್ ಇದೀಗ ಮಲಬಾರ್ ಗೋಲ್ಡ್​ ಅಂಡ್​ ಡೈಮಂಡ್ಸ್(Malabar Gold & Diamonds)​ ಸಂಸ್ಥೆಯ ನೂತನ ರಾಯಭಾರಿಯಾಗಿದ್ದಾರೆ. ಈ ಬಗ್ಗೆ ಸಂಸ್ಥೆ ಕೂಡ ಹೊಸದೊಂದು ಪೋಸ್ಟರ್ ಬಿಡುಗಡೆಗೊಳಿಸುವ ಮುಖೇನ ಖಚಿತಪಡಿಸಿದೆ.

ಪೋಸ್ಟರ್​ನಲ್ಲಿ ಬಹಳ ಆಕರ್ಷಕವಾಗಿ ಕಾಣಿಸುವ ಜೂ. ಎನ್​ಟಿಆರ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗುತ್ತಿದ್ದು, ಈ ಕುರಿತು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ನಿಮ್ಮ ಮುಂದಿನ ಎಲ್ಲಾ ಚಿತ್ರಗಳಿಗೂ ಶುಭವಾಗಲಿ, ಜಾನ್ವಿ ಕಪೂರ್ ಅವರೊಟ್ಟಿಗೆ ಅಭಿನಯಿಸುತ್ತಿರುವ ದೇವರಾ(Devara) ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿ ತಿಳಿಸಿದ್ದಾರೆ.

ಮಲಬಾರ್ ಗೋಲ್ಡ್​ ಅಂಡ್ ಡೈಮಂಡ್ಸ್ ಸಂಸ್ಥೆಗೆ ನೂತನ ರಾಯಭಾರಿಯಾಗಿರುವ ಜೂ. ಎನ್​ಟಿಆರ್, ಇತ್ತೀಚೆಗಷ್ಟೇ ಮ್ಯಾಕ್​ಡೋನಲ್ಡ್(McDonalds) ಸಂಸ್ಥೆಗೂ ಕೂಡ ಸಹಿ ಹಾಕುವ ಮೂಲಕ ನೂತನ ರಾಯಭಾರಿಯಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net