

ಜೋಕರ್, ಕಳೆದ ವರ್ಷ ಹಾಲಿವುಡ್ನಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ ಸಿನಿಮಾ. ಅಷ್ಟೇ ಅಲ್ಲ ಆಸ್ಕರ್ ಸಮಾರಂಭದಲ್ಲೂ ಎಲ್ಲರಿಂದ ಪ್ರಶಂಸೆ ಪಡೆದುಕೊಂಡ ಸಿನಿಮಾ. ಚಿತ್ರದಲ್ಲಿನ ನಟನೆಗಾಗಿ ನಟ ಜೋಕಿನ ಫೋನಿಕ್ಸ್ಗೆ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿಯೂ ಈ ಚಿತ್ರಕ್ಕೆ ಲಭ್ಯವಾಗಿತ್ತು. ಇದೀಗ ಇದೇ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಆಗಲು ದಿನಾಂಕ ಘೋಷಿಸಿಕೊಂಡಿದೆ. ಹೌದು, ಭಾರತದಲ್ಲಿ ಏ. 20ರಂದು ಅಮೆಜಾನ್ನಲ್ಲಿ ಜೋಕರ್ ಲಭ್ಯವಾಗಲಿದೆ. ಈಗಾಗಲೇ ವಿದೇಶಗಳಲ್ಲಿನ ಅಮೆಜಾನ್ ಬಳಕೆದಾರರಿಗೆ ಲಭ್ಯವಿರುವ ಈ ಚಿತ್ರ ಭಾರತದ ಬಳಕೆದಾರರಿಗೆ ಲಭ್ಯವಾಗಿರಲಿಲ್ಲ. ಇದೀಗ ಅದಕ್ಕೂ ಸಮಯ ಕೂಡಿಬಂದಿದ್ದು, ಮೊಬೈಲ್ ಫೋನ್ನಲ್ಲೇ ಸಿನಿಮಾ ಕಣ್ತುಂಬಿಕೊಳ್ಳಬಹುದಾಗಿದೆ. ಜೋಕಿನ್ ಫೋನಿಕ್ಸ್ ಜೋಕರ್ ಆಗಿ ಕಾಣಿಸಿಕೊಂಡಿರುವ ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ತೊಡ್ ಫಿಲ್ಲಿಪ್ಸ್ ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್)