

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಮತ್ತೆ ಸ್ಯಾಂಡಲ್ವುಡ್ಗೆ ಬಂದಿದ್ದಾರೆ. ಈ ಹಿಂದೆ ಪುನೀತ್ ರಾಜ್ಕುಮಾರ್ ನಟನೆಯ ‘ರಾಜಕುಮಾರ’ ಸಿನಿಮಾದಲ್ಲಿ ‘ಅಪು್ಪ ಡಾನ್ಸ್ ಡಾನ್ಸ್’ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದರು. ಈಗ ಮತ್ತೆ ಪುನೀತ್ ಅವರ ‘ಯುವರತ್ನ’ಕ್ಕೆ ನೃತ್ಯ ನಿರ್ದೇಶನ ಮಾಡಲು ಬಂದಿದ್ದಾರೆ.
‘ಯುವರತ್ನ’ ಸಿನಿಮಾ ಪುನೀತ್ ಮತ್ತು ಸಂತೋಷ್ ಆನಂದ್ರಾಮ್ ಅವರ ಎರಡನೇ ಕಾಂಬಿನೇಷನ್ನ ಸಿನಿಮಾ. ಸಾಯೇಶಾ ಸೈಗಲ್ ನಾಯಕಿಯಾಗಿರುವ ಈ ಚಿತ್ರ ಈಗಾಗಲೇ ಕೊನೆಯ ಹಂತದ ಚಿತ್ರೀಕರಣದಲ್ಲಿದೆ.
‘ಅಪು್ಪ ಡಾನ್ಸ್’ ಎಂದು ಕುಣಿಸಿದ್ದ, ಜಾನಿ ಮಾಸ್ಟರ್ಗೆ ಈ ಬಾರಿ ‘ಊರಿಗೊಬ್ಬ ರಾಜ’ ಸಾಹಿತ್ಯವುಳ್ಳ ಹಾಡನ್ನು ನೀಡಿದ್ದಾರೆ ಸಂತೋಷ್. ಆ ಹಾಡಿಗೆ ಎಸ್.ಎಸ್. ತಮನ್ ಸಂಗೀತ ನೀಡಿದ್ದಾರೆ. ಡಾಲಿ ಧನಂಜಯ, ದಿಗಂತ್, ಪ್ರಕಾಶ್ ರಾಜ್, ಸೋನು ಗೌಡ ಸೇರಿ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.