ಪ್ರಶಾಂತ್ ನೀಲ್- ಪ್ರಭಾಸ್ ‘ಸಲಾರ್​’ ಸಿನಿಮಾಕ್ಕೆ ಬಾಲಿವುಡ್​ನ ಈ ಖ್ಯಾತ ನಟ ವಿಲನ್​!?

Salaar-Prashanth-Neel
Published on

ಮುಂಬೈ: ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಘೋಷಣೆ ಆಗಿದೆ. ತಾಂತ್ರಿಕ ವರ್ಗದ ಒಬ್ಬೊಬ್ಬರೆ ಈ ಸಿನಿಮಾಕ್ಕೆ ಆಯ್ಕೆಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಸಂಗೀತ ನಿರ್ದೇಶಕರಾಗಿ ರವಿ ಬಸ್ರೂರು ತಂಡ ಸೇರ್ಪಡೆಗೊಂಡಿದ್ದಾರೆ. ಇದೀಗ ತಾರಾಬಳಗದ ವಿಚಾರವೊಂದು ಸುದ್ದಿಯಲ್ಲಿದೆ. ಅದೇನೆಂದರೆ ಬಾಲಿವುಡ್​ನ ಸ್ಟಾರ್ ನಟ ಜಾನ್​ ಅಬ್ರಾಹಂ ಸಲಾರ್​ನಲ್ಲಿ ನೆಗೆಟಿವ್ ಪಾತ್ರ ಮಾಡಲಿದ್ದಾರಂತೆ.

ಹೌದು, ಹೀಗೊಂದು ಸುದ್ದಿ ಇದೀಗ ಸದ್ದು ಮಾಡುತ್ತಿದೆ. ಪ್ರಭಾಸ್ ಗೆ ಎದುರಾಗಿ ಜಾನ್ ಅಬ್ರಹಾಂ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಗರಿಗೆದರಿದೆ. ಈಗಾಗಲೇ ಸಲಾರ್ ಟೀಮ್​ ಜಾನ್​ ಅಬ್ರಹಂ ಟೀಮ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆಯಂತೆ. ಆದರೆ, ಅಂತಿಮ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ಇನ್ನು ಈ ಹಿಂದೆ ಇದೇ ಚಿತ್ರದ ನಾಯಕಿ ವಿಚಾರವೂ ಮುನ್ನೆಲೆಗೆ ಬಂದಿತ್ತು. ಬಾಲಿವುಡ್ ಬೋಲ್ಡ್ ಬ್ಯೂಟಿ ದಿಶಾ ಪಟಾಣಿ ಪ್ರಭಾಸ್​ಗೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಬಗ್ಗೆಯೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಪೋಸ್ಟರ್​ ಮತ್ತು ಶೀರ್ಷಿಕೆಯ ಮೂಲಕ ಭಾರೀ ಟ್ರೆಂಡ್ ಸೃಷ್ಟಿಸಿದ್ದ ಸಲಾರ್​ ಚಿತ್ರವನ್ನು ಇಂಡಿಯನ್​ ಸಿನಿಮಾ ಎಂದು ನಿರ್ಮಾಪಕರು ಘೋಷಿಸಿಕೊಂಡಿದ್ದಾರೆ. ಕನ್ನಡದ ಜತೆಗೆ ಭಾರತದ ಹತ್ತಾರು ಭಾಷೆಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಬಗ್ಗೆಯೂ ಈಗಾಗಲೇ ಹೊಂಬಾಳೆ ನಿರ್ಮಾಣ ಸಂಸ್ಥೆ ಹೇಳಿಕೊಂಡಿದ್ದು, 100 ಕೋಟಿಗೂ ಅಧಿಕ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬರಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net