ಐದಲ್ಲ, 10 ಲಕ್ಷ ಕೇಳ್ತೀನಿ! ಹಾಡಲು $5 ಲಕ್ಷ ಕೇಳ್ತಾರೆ ಎಂಬ ಆರೋಪಕ್ಕೆ ಜೋಗಿ ಪ್ರೇಮ್​ ಸ್ಪಷ್ಟನೆ

XAX
Published on

ಬೆಂಗಳೂರು: ಇತ್ತೀಚೆಗಷ್ಟೆ ಚಿತ್ರತಂಡದವರೊಬ್ಬರು ನಿರ್ದೇಶಕ ಜೋಗಿ ಪ್ರೇಮ್​ ಮೇಲೆ, "ಒಂದು ಹಾಡು ಹಾಡೋಕೆ ಐದು ಲಕ್ಷ ರೂ. ಡಿಮ್ಯಾಂಡ್​ ಮಾಡಿದರು' ಎಂದು ಆರೋಪಿಸಿದ್ದರು. ಅದಕ್ಕೆ ಸಾಂಗ್​ ರೆಕಾರ್ಡಿಂಗ್​ ಸ್ಟುಡಿಯೋದಲ್ಲಿ ಮತ್ತೊಂದು ಸಿನಿಮಾ ಹಾಡನ್ನು ಹಾಡುತ್ತಾ, ಜೋಗಿ ಪ್ರೇಮ್​ ಸ್ಪಷ್ಟನೆ ನೀಡಿದ್ದಾರೆ. "ಐದಲ್ಲಾ, ಹತ್ತು ಲಕ್ಷ ಕೇಳುತ್ತೇನೆ. ಮುಂಬೈ ಸಿಂಗರ್​ಗಳಿಗೆ ಆದರೆ ಕೊಡುತ್ತೀರಾ. ಕನ್ನಡಿಗರಿಗೆ ಯಾಕೆ ಕೊಡಬಾರದು? ಜತೆಗೆ ನಾನು ಹಾಡಲು ಪಡೆಯುವ ಸಂಭಾವನೆಯ ಸಂಪೂರ್ಣ ಮೊತ್ತ ಅಮ್ಮನ ಹೆಸರಿನಲ್ಲಿ ಮಾಡಿರುವ ಟ್ರಸ್ಟ್​ಗೆ ಸೇರುತ್ತದೆ. ಆ ಮೂಲಕ ಅನೇಕ ಸಮಾಜಮುಖಿ ಕೆಲಸಗಳಿಗೆ ಬಳಕೆಯಾಗುತ್ತದೆ' ಎಂದು ಮಾಹಿತಿ ನೀಡಿದರು.

ಅಂದಹಾಗೆ, ಅವರ ಈ ಮಾತಿಗೆ ವೇದಿಕೆಯಾಗಿದ್ದು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ "ಲೈಫ್ ಟುಡೇ' ಚಿತ್ರದ ಸಾಂಗ್​ ರೆಕಾರ್ಡಿಂಗ್​. ಈಗಾಗಲೇ ತಮಿಳು ಹಾಡು ರಿಲೀಸ್​ ಆಗಿದ್ದು, ನಟ, ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್​ ಕುಮಾರ್​ ಹಾಡಿದ್ದರು. ಕನ್ನಡ ವರ್ಷನ್​ಗೆ ಶ್ರೀಧರ್​ ವಿ. ಸಂಭ್ರಮ್​ ಸಂಗೀತ ನೀಡಿದ್ದು, ಪ್ರೇಮ್​ ಧ್ವನಿಯಾಗಿದ್ದಾರೆ. "ಬೇಡುವೆನು ವರವನ್ನು', "ಮರಳಿ ಬಾರದೂರಿಗೆ' ಸೇರಿ ಹಲವು ಹಿಟ್​ ಸಾಂಗ್​ಗಳನ್ನು ಹಾಡಿರುವ ಪ್ರೇಮ್​, "ಲೈಫ್​​ ಟುಡೇ' ಚಿತ್ರದ "ಒಳ್ಳೆ ಹುಡುಗ್ರು ಸಿಕ್ಕರೆ' ಎಂದು ಸಾಗುವ ಹಾಡನ್ನು ಹಾಡಿದ್ದಾರೆ.

ಸಂಗೀತ ನಿರ್ದೇಶಕ ಶ್ರೀಧರ್​ ವಿ. ಸಂಭ್ರಮ್​, "ಪ್ರೇಮ್​ ಸರ್​ ಗಾಯನದ ಅಭಿಮಾನಿ ನಾನು. ಅವರ ಧ್ವನಿಯಲ್ಲಿರುವ ಮುಗ್ಧತೆ, ನೋವಿನ ಗಾಢತೆ ಈ ಹಾಡಿಗೆ ಬೇಕಿತ್ತು' ಎಂದು ಸಂತಸವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಕಾಂತ ಕನ್ನಲ್ಲಿ ಆ್ಯಕ್ಷನ್​&ಕಟ್​ ಹೇಳಿದ್ದು, ಕಿರಣ್​ ಆದಿತ್ಯ , ಲೇಖಚಂದ್ರ, ರಥರ್ವ ತಬಲಾ ನಾಣಿ, ಅಪೂರ್ವ, ಕಾಕ್ರೋಚ್​ ಸುಧಿ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net