

ಸೀನ್’ ಅಥವಾ ‘ಆವೇಶಮ್’ ಪಾರ್ಟ್ 2 ತರುವ ಆಲೋಚನೆ ಇಲ್ಲ ಎಂದ ನಿರ್ದೇಶಕ ಜಿತು ಮಾಧವನ್.
ರೋಮಾಚಂ 2 ಬರಲಿದೆ ಎಂದು ಸ್ಪಷ್ಟನೆ ಕೊಟ್ಟ ನಿರ್ದೇಶಕ.
ಕುತೂಹಲ ಉಳಿದಿರಲಿ ಎಂದು ಸೀನ್, ಆವೇಶಂನಲ್ಲಿ ಕತೆಯನ್ನು ಪೂರ್ತಿ ಪೂರ್ಣಗೊಳಿಸದಂತೆ ಮಾಡಲಾಗಿತ್ತು ಎಂದು ಸ್ಪಷ್ಟನೆ.
Jithu Madhavan: ಈಗ ಭಾರತೀಯ ಸಿನಿಮಾ ರಂಗದಲ್ಲಿ ಸೀಕ್ವೆಲ್ಗಳ ಹವಾ ಜೋರಾಗಿದೆ. ಕಾಕ್ಟೇಲ್ 2, ಜೈಲರ್ 2, ಲವ್ ಮಾಕ್ಟೇಲ್ 3 ಹೀಗೆ ಸಾಕಷ್ಟು ಸಿನಿಮಾಗಳ ಮುಂದುವರೆದ ಭಾಗಗಳು ಬರುತ್ತಿವೆ. ಅದರಂತೆ ಆವೇಶಂ ಮತ್ತು ಸೀನ್ ಸಿನಿಮಾದ ಸೀಕ್ವೆಲ್ ಮಾಡುವ ಪ್ಲ್ಯಾನ್ ಇದೆಯಾ ಎನ್ನುವ ಸಾವಿರ ಪ್ರಶ್ನೆಗೆ ನಿರ್ದೇಶಕ ಜಿತು ಮಾಧವನ್ ಸ್ಪಷ್ಟನೆ ಕೊಟ್ಟಿದ್ದು, ಆ ಬಗ್ಗೆ ಇನ್ನೂ ಯಾವುದೇ ಪ್ಲ್ಯಾನ್ ಮಾಡಿಲ್ಲ ಎನ್ನುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಹೌದು, ಸೀನ್ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಜಿತು ಮಾಧವನ್ ಅವರು, ‘ಸೀನ್’, ಆವೇಶಮ್’ ಪಾರ್ಟ್ 2 ಮಾಡುವ ಯಾವುದೇ ಆಲೋಚನೆ ಇಲ್ಲ. ಆದರೆ, ರೋಮಾಚಂ ಚಿತ್ರಕ್ಕೆ ಮಾತ್ರ ಸೀಕ್ವೆಲ್ ಇರುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ.
ಸೀನಿಯರ್ಸ್ನಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನ ಸ್ಥಳೀಯ ರೌಡಿ ರಂಗ ಗಂಗಾಧರನ್ ಜೊತೆ ಸಂಬಂಧ ಬೆಳೆಸುವ ಇಂಜಿನಿಯರ್ ಹುಡುಗರು..ಆ ನಂತರ ಆತನಿಂದ ಅನುಭವಿಸುವ ರೋಚಕ ಘಟನೆಗಳು ಹಾಸ್ಯಮಯವಾಗಿದೆ. 2024ರಲ್ಲಿ ರಿಲೀಸ್ ಆಗಿದ್ದ ಸಿನಿಮಾ ಸಾಕಷ್ಟು ಹಿಟ್ ಕಂಡಿತ್ತು. ಇನ್ನೂ ಸೀನ್ ಸಿನಿಮಾ ಕ್ರೈ ಥ್ರಿಲ್ಲರ್ ಕಾಮಿಡಿ ಸಿನಿಮಾವಾಗಿದೆ. ಈಗಾಗಲೇ ಥಿಯೇಟರ್ನಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಡಿಸೆಂಬರ್ನಲ್ಲಿ ಒಟಿಟಿಗೆ ಲಗ್ಗೆ ಇಡಲಿದೆ. ನಜ್ರಿಯಾ ನಜೀಮ್, ನಟ ಸೂರ್ಯ ಹಾಗೂ ನೆಸ್ಲೆನ್ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ.
ರೋಮಾಂಚಂ ಸಿನಿಮಾವು 2013ರಲ್ಲಿ ರಿಲೀಸ್ ಆಗಿದ್ದು, ಇದೊಂದು ಹಾರರ್-ಕಾಮಿಡಿ ಸಿನಿಮಾವಾಗಿದೆ. . ಸೌಬಿನ್ ಶಾಹಿರ್, ಅರ್ಜುನ್ ಅಶೋಕನ್, ಸಜಿನ್ ಗೋಪು, ಸಿಜು ಸನ್ನಿ ಮತ್ತು ಚೆಂಬನ್ ವಿನೋದ್ ಜೋಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ನಿರ್ದೇಶಿಸಲಾಗಿದೆ.
ಈ ಚಿತ್ರಗಳ ಅಂತ್ಯಗಳು ಕಥೆ ಅಲ್ಲಿಗೆ ಮುಗಿಯುವುದಿಲ್ಲ ಎಂಬುದನ್ನು ಮಾತ್ರ ಸೂಚಿಸುತ್ತವೆ. ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಬರುವಾಗ ಕಥೆಯಲ್ಲಿ ಇನ್ನೂ ಏನೋ ಉಳಿದಿದೆ ಎಂಬ ಅನುಭವವನ್ನು ಪಡೆಯಲಿ ಎಂಬ ಕಾರಣಕ್ಕೇ ಆ ಅಂತಿಮ ದೃಶ್ಯಗಳನ್ನು ಸೇರಿಸಲಾಗಿತ್ತು. ಉಳಿದ ಎಲ್ಲ ಸುದ್ದಿಗಳು ಕೇವಲ ಊಹಾಪೋಹಗಳಷ್ಟೇ ಎಂದಿದ್ದಾರೆ.
ಇದಲ್ಲದೆ, ದುಲ್ಕರ್ ಸಲ್ಮಾನ್ ಮತ್ತು ಮಮಿತಾ ಬೈಜು ಅವರೊಂದಿಗೆ ಹೊಸ ಪ್ರಾಜೆಕ್ಟ್ ಬರಲಿದೆ ಎಂಬ ವಾದಗಳನ್ನೂ ಜಿತು ಮಾಧವನ್ ತಳ್ಳಿಹಾಕಿದರು. ಆ ಇಬ್ಬರು ನಟರು ತಮ್ಮೊಂದಿಗೆ ಯಾವುದೇ ಪ್ರಾಜೆಕ್ಟ್ ಕುರಿತು ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).