

ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಬಗ್ಗೆ ಅದೆಷ್ಟು ಹುಡುಗರು ತಲೆ ಕೆಡಿಸಿಕೊಂಡಿಲ್ಲ ಹೇಳಿ. ಹುಚ್ಚು ಅಭಿಮಾನ ಇಟ್ಟುಕೊಂಡಿರುವ ನಟಿಯೇ ಎದುರು ಬಂದು ನನ್ನ ಜತೆ ಡೇಟ್ಗೆ ಬರುತ್ತೀಯಾ ಎಂದು ಕೇಳಿಬಿಟ್ಟರೆ? ಹೌದು ಇಂತಹ ಒಂದು ವಿಶೇಷ ಅವಕಾಶ ರಿಯಾಲಿಟಿ ಶೋನ ಸ್ಪರ್ಧಿಯೊಬ್ಬನಿಗೆ ಬಂದೊದಗಿದೆ.
ಜಾನ್ವಿ ಕಪೂರ್ ಅಭಿನಯದ ರೂಹಿ ಸಿನಿಮಾ ಇಂದು ಬಿಡುಗಡೆಯಾಗಿದೆ. ಅದರ ಪ್ರಮೋಷನ್ ಸಲುವಾಗಿ ಜಾನ್ವಿ ಕಪೂರ್ ಮತ್ತು ವರುಣ್ ಶರ್ಮಾ ಈ ವಾರಾಂತ್ಯದ ಡ್ಯಾನ್ಸ್ ದಿವಾನೆ 3 ಷೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಚಿತ್ರೀಕರಣ ಈಗಾಗಲೇ ಮುಗಿದಿದೆ. ಷೋನಲ್ಲಿ ಪಿಯೂಷ್ ಹೆಸರಿನ ಸ್ಪರ್ಧಿ ಮಾಡಿದ ನೃತ್ಯಕ್ಕೆ ಜಾನ್ವಿ ಫಿದಾ ಆಗಿದ್ದಾರೆ. ನೀವು ಥೇಟ್ ಹೀರೋನಂತೆಯೇ ಡ್ಯಾನ್ಸ್ ಮಾಡ್ತೀರಿ, ನನ್ನ ಜತೆ ಡೇಟ್ಗೆ ಬರ್ತೀರಾ ಎನ್ನುವ ಪ್ರಶ್ನೆಯನ್ನೂ ಕೇಳಿದ್ದಾರೆ. ಅದಕ್ಕೆ ನಾಚಿಕೆ ಮತ್ತು ಭಯದಿಂದ ಪಿಯೂಷ್ ಉತ್ತರಿಸಿರುವುದನ್ನು ಪ್ರೋಮೋ ವಿಡಿಯೋದಲ್ಲಿ ನೋಡಬಹುದು.
ಡೇಟ್ನ ಪ್ರಸ್ತಾಪ ಬಂದ ಮೇಲೆ ಕಾರ್ಯಕ್ರಮದ ನಿರೂಪಕ ಅವರಿಬ್ಬರಿಗಾಗಿ ವಿಶೇಷ ಡೇಟ್ನ್ನೂ ಏರ್ಪಡಿಸುತ್ತಾನೆ. ಅದರಲ್ಲಿ ಆಗುವ ಒಂದಿಷ್ಟು ಕಾಮಿಡಿ ಝಲಕ್ನ್ನು ಪ್ರೋಮೋದಲ್ಲಿ ನೋಡಬಹುದಾಗಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ