ಬಿಕಿನಿ ಅವತಾರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಯಶ್ರೀ ಆರಾಧ್ಯ: ಟ್ರೋಲ್​ ಆದ್ರು ಮಾರಿಮುತ್ತು ಮೊಮ್ಮಗಳು!

Jayshree Aradhya
Published on

ಬೆಂಗಳೂರು: ಬಿಗ್​ ಬಾಸ್​ ಒಟಿಟಿ ಕನ್ನಡದ ಮೊದಲ ಸೀಸನ್​ನಲ್ಲಿ ಸ್ಪರ್ಧಿಯಾಗಿ ಎಲ್ಲರ ಗಮನ ಸೆಳೆದಿದ್ದ ನಟಿ ಜಯಶ್ರೀ ಆರಾಧ್ಯ ಗ್ಲಾಮರಸ್​ ಗೊಂಬೆ ಎಂಬುದು ಎಲ್ಲರಿಗೂ ತಿಳಿದಿದೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನು ತಮ್ಮತ್ತ ಸೆಳೆಯುವ ಜಯಶ್ರೀ ಇದೀಗ ಇನ್ನುಷ್ಟು ಹಾಟ್​ ಅವತಾರ ತಾಳಿದ್ದಾರೆ. ಜಯಶ್ರೀ ಅವರು ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದೆ.

ಜಯಶ್ರೀ ಸದ್ಯ ಥಾಯ್ಲೆಂಡ್​ ಪ್ರವಾಸದಲ್ಲಿದ್ದು, ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಜಯಶ್ರೀ ಆಗಾಗ ಹಾಟ್​ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಡುತ್ತಿರುತ್ತಾರೆ. ಇದೀಗ ಥಾಯ್ಲೆಂಡ್​ ಪ್ರವಾಸದ ಫೋಟೋಗಳನ್ನು ಸಹ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

Jayshree Aradhya 1

ಥಾಯ್ಲೆಂಡ್​ನ ಫುಕೆಟ್​ ದ್ವೀಪದಲ್ಲಿರುವ ಕರೋನ್​ ಬೀಚ್​ನಲ್ಲಿ ಕಪ್ಪು ಬಣ್ಣದ ಬಿಕಿನಿ ಅವತಾರದಲ್ಲಿ ಕ್ಯಾಮೆರಾಗೆ ಮಾದಕವಾಗಿ ಪೋಸ್​​ ನೀಡಿದ್ದಾರೆ. ಪುಕೆಟ್​ ಡೈರಿ 2023 ಎಂದು ಶೀರ್ಷಿಕೆ ನೀಡಿರುವ ಜಯಶ್ರೀ, ಪ್ರವಾಸದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪುಕೆಟ್​ನಲ್ಲಿರುವ ಟೈಗರ್​ ಪಾರ್ಕ್​, ದೊಡ್ಡ ಬುದ್ಧನ ಪ್ರತಿಮೆ ಸೇರಿದಂತೆ ಅನೇಕ ಸುಂದರ ತಾಣಗಳಿಗೆ ಜಯಶ್ರೀ ಭೇಟಿ ನೀಡಿದ್ದಾರೆ.

Jayshree Aradhya 2

ಬಿಕಿನಿ ಉಡುಗೆ ಟ್ರೋಲ್​

ಜಯಶ್ರೀ ಅವರನ್ನು ಬಿಕಿನಿ ನೋಡಿದ ನೆಟ್ಟಿಗರು ಅವರನ್ನು ಜಾಲತಾಣದಲ್ಲಿ ಟ್ರೋಲ್​ ಮಾಡುತ್ತಿದ್ದಾರೆ. ಅಪ್ಪಾ ಏನ್​ ಕಾಲ ಬಂತಪ್ಪಾ ಎಂದು ನೆಟ್ಟಿಗರೊಬ್ಬರು ಕಮೆಂಟಿಸಿದ್ದಾರೆ. ಇಂತಹ ಫೋಟೋಗಳನ್ನು ಪೋಸ್ಟ್​ ಮಾಡಬೇಡಿ, ಈ ರೀತಿಯಲ್ಲಿ ನಿಮ್ಮನ್ನು ನೋಡಲು ಆಗುವುದಿಲ್ಲ ಎಂದು ಮತ್ತೊಬ್ಬ ನೆಟ್ಟಿಗ ತಿಳಿಸಿದ್ದಾರೆ. ಹುಡುಗಿಯಾಗಿ ಹೇಗಿರಬೇಕು ಅಂತಾ ಗೊತ್ತಿಲ್ವಾ? ಹೀಗಿ ಹಲವು ಬಗೆಯಲ್ಲಿ ಟ್ವೀಟ್​ ಮಾಡಿ ಜಯಶ್ರೀ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ.

Jayshree Aradhya 3

ಇನ್ನು ಕೆಲವರು ಜಯಶ್ರೀ ಆರಾಧ್ಯ ಅವರ ಹಾಟ್​ ಲುಕ್​​ಗೆ ಫಿದಾ ಆಗಿದ್ದಾರೆ. ಬ್ಯೂಟಿಫುಲ್​ ಫೋಟೋ ಎಂದು ಬಣ್ಣಿಸಿದ್ದಾರೆ. ಇನ್ನಷ್ಟು ಫೋಟೋಗಳನ್ನು ಪೋಸ್ಟ್​ ಮಾಡಿ ಎಂದು ಕೇಳಿದ್ದಾರೆ.

Jayshree Aradhya 4

ಅಂದಹಾಗೆ ಜಯಶ್ರೀ ಅವರು ಕನ್ನಡ ಬಿಗ್ ಬಾಸ್ ಚೊಚ್ಚಲ ಓಟಿಟಿ (OTT) ಸೀಸನ್​ನಲ್ಲಿ 12ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಕೆಲವೇ ವಾರಗಳಲ್ಲಿ ಮನೆಯಿಂದ ಎಲಿಮಿನೇಟ್​ ಆಗಿ ವಾಪಸ್​ ಬಂದಿದ್ದರು. ಮನೆಯ ಒಳಗೆ ಇದ್ದಾಗಲೂ ತುಂಬಾ ಬೋಲ್ಡ್​ ಆಗಿ ಜಯಶ್ರೀ ಕಾಣಿಸಿಕೊಳ್ಳುತ್ತಿದ್ದರು. ಜಯಶ್ರೀ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿ ಪರಿಚಿತವಾಗಿರುವ ಮಾರಿಮುತ್ತು ಅವರ ಮೊಮ್ಮಗಳು ಕೂಡ ಹೌದು. ಉದ್ಯಮ ಮಾತ್ರವಲ್ಲದೆ, ಜಯಶ್ರೀ ಕಲಾವಿದೆಯಾಗಿಯು ಗುರುತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net