ಚಿತ್ರಮಂದಿರಕ್ಕೆ ತಲೈವಿ ಎಂಟ್ರಿ; 10ಕ್ಕೆ ಜಯಲಲಿತಾ ಬಯೋಪಿಕ್

Jayalalitha
Published on

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 23ರಂದು ಕಂಗನಾ ರಣಾವತ್ ಅಭಿನಯದ ‘ತಲೈವಿ’ ಸಿನಿಮಾ ತೆರೆಕಂಡು ಹಳೇ ಮಾತಾಗಿರಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಇದೀಗ ಆಗಿದ್ದಾಗಲಿ ಎಂದು ಗಣೇಶ ಚೌತಿ (ಸೆ.10) ಪ್ರಯುಕ್ತ ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡುತ್ತಿದೆ ಚಿತ್ರತಂಡ. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಜೀವನ ಆಧರಿತ ‘ತಲೈವಿ’ ಚಿತ್ರದಲ್ಲಿ ಕಂಗನಾ ಟೈಟಲ್ ರೋಲ್ ನಿಭಾಯಿಸುತ್ತಿದ್ದು, ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್, ಟೀಸರ್ ಮತ್ತು ಟ್ರೇಲರ್​ಗಳು ಸಾಕಷ್ಟು ಕುತೂಹಲ ಮೂಡಿಸಿವೆ.

ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರವನ್ನು ‘ತಲೈವ’, ‘ದೈವ ತಿರುಮಗಳ್’ ಮುಂತಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಎ.ಎಲ್. ವಿಜಯ್ ನಿರ್ದೇಶನ ಮಾಡಿದ್ದಾರೆ. ತಾರಾಬಳಗದಲ್ಲಿಯೂ ಇಡೀ ಸಿನಿಮಾ ಶ್ರೀಮಂತವಾಗಿದೆ. ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ನಟಿಸಿದರೆ, ಮಧೂ, ಪ್ರಕಾಶ್ ರಾಜ್, ಭಾಗ್ಯಶ್ರೀ ಸೇರಿ ಹಲವರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net