'ಜವಾನ್'​ ಟ್ರೇಲರ್​ ಔಟ್​; ಫ್ಯಾನ್ಸ್​ಗೆ ಡಬ್ಬಲ್​ ಧಮಾಕ ನೀಡಿದ ನಟಿ ನಯನತಾರ!

Untitled design - 2023-08-31T142939.067
Published on

ಮುಂಬೈ: ಬಾಲಿವುಡ್​ ಕಿಂಗ್​ ಖಾನ್​, ನಟ ಶಾರೂಖ್​ ಖಾನ್​ ಅಭಿನಯದ ಬಹುನಿರೀಕ್ಷಿತ 'ಜವಾನ್' ಚಿತ್ರದ ಟ್ರೇಲರ್​ ಇಂದು ಅಧಿಕೃತವಾಗಿ ಬಿಡುಗಡೆಗೊಂಡಿದೆ. ಸದ್ಯ ಈ ಸಂಗತಿ ಎಸ್​ಆರ್​ಕೆ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.

ಟ್ರೇಲರ್​ ನೋಡಿದ ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳು ಚಿತ್ರದ ಬಿಜಿಎಂ, ದೃಶ್ಯಗಳು, ವಿಎಫ್​ಎಕ್ಸ್ ಸೇರಿದಂತೆ ತಮ್ಮ ನೆಚ್ಚಿನ ನಟನ ಲುಕ್​ ಬಗ್ಗೆ ಕಮೆಂಟ್ ಮೂಲಕ ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಇದೊಂದು ಸಿನಿಮಾ ಅಲ್ಲ, ಎಮೋಷನ್​" ಎಂದು ಹೇಳಿರುವ ಎಸ್​ಆರ್​ಕೆ ಅಭಿಮಾನಿಗಳು ಟ್ರೇಲರ್​ಗೆ ಫಿದಾ ಆಗಿದ್ದಾರೆ.

ಚಿತ್ರದಲ್ಲಿ ಶಾರೂಖ್​ಗೆ ನಾಯಕಿಯಾಗಿ ಸಾಥ್​ ನೀಡಿರುವ ನಟಿ ನಯನತಾರ ಪಾತ್ರ ಸಾಕಷ್ಟು ಕುತೂಹಲ ಕೆರಳಿಸಿದ್ದು, ಪ್ರಮುಖ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಮಣಿ ನಟಿಸಿದ್ದಾರೆ.

ಸದ್ಯ ಒಂದೆಡೆ ತಮ್ಮ ಬಹುನಿರೀಕ್ಷಿತ 'ಜವಾನ್​' ಟ್ರೇಲರ್​ ಬಗ್ಗೆ ಮಾಹಿತಿ ನೀಡಿದ ನಯನತಾರ ಈಗ ಅಧಿಕೃತವಾಗಿ ಇನ್​ಸ್ಟಾಗ್ರಾಮ್​ಗೆ ಲಗ್ಗೆಯಿಟ್ಟಿದ್ದು, ಹೊಸ ಖಾತೆ ತೆರೆಯುವ ಮೂಲಕ ಅಭಿಮಾನಿಗಳಿಗೆ ಡಬಲ್​ ಧಮಾಕ ನೀಡಿದ್ದಾರೆ.

ಹಲವು ಸಾಮಾಜಿಕ ಜಾಲತಾಣದ ಫ್ಲ್ಯಾಟ್​ಫಾರ್ಮ್​ಗಳಲ್ಲಿದ್ದ ನಟಿ ಇದೀಗ ಇನ್​ಸ್ಟಾಗ್ರಾಮ್​ಗೂ ಕಾಲಿಟ್ಟಿದ್ದಾರೆ. ಈ ಹಿಂದೆ ಹಲವಾರು ಬಾರಿ ನೀವು ಇನ್​ಸ್ಟಾದಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದ್ದ ಅಭಿಮಾನಿಗಳಿಗೆ, ಇದೀಗ ಟ್ರೇಲರ್ ರಿಲೀಸ್​ ಜತೆಗೆ ಡಬಲ್​ ಖುಷಿ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net