'ಶೇರಿಂಗ್ ಎ ರೈಡ್’: ಜಾಕ್​ಲೀನ್ ಫರ್ನಾಂಡಿಸ್ ಖಾಕಿ ಖದರ್

IMG-20210518-WA0035
Published on

ಈ ವರ್ಷದ ಆರಂಭದಲ್ಲಿ ಬಾಲಿವುಡ್ ನಟಿ ಜಾಕ್​ಲೀನ್ ಫರ್ನಾಂಡಿಸ್ ‘ವುಮೆನ್ಸ್ ಸ್ಟೋರೀಸ್’ ಎಂಬ ಹಾಲಿವುಡ್ ಆಂಥಾಲಜಿ (ಕಿರುಚಿತ್ರಗಳ ಗುಚ್ಛ) ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯೊಂದು ಓದಿದ್ದು ನೆನಪಿರ ಬಹುದು. ಆದರೆ, ಜಾಕ್​ಲೀನ್ ಪಾತ್ರವೇನು ಎಂಬುದನ್ನು ರಹಸ್ಯವಾಗಿಡಲಾಗಿತ್ತು.

ಈಗಿನ ಸುದ್ದಿಯ ಪ್ರಕಾರ, ಜಾಕ್​ಲೀನ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಜಗತ್ತಿನ ಬೇರೆಬೇರೆ ದೇಶಗಳ ಆರು ಮಹಿಳಾ ನಿರ್ದೇಶಕಿಯರು ಒಂದೊಂದು ಕಥೆಯನ್ನು ನಿರ್ದೇಶಿಸಿದ್ದಾರೆ. ಜಾಕ್​ಲೀನ್ ಅಭಿನಯದ ಕಿರುಚಿತ್ರಕ್ಕೆ ‘ಶೇರಿಂಗ್ ಎ ರೈಡ್’ ಎಂಬ ಹೆಸರನ್ನು ಇಡಲಾಗಿದ್ದು, ಇದನ್ನು ಲೀನಾ ಯಾದವ್ ನಿರ್ದೇಶನ ಮಾಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net