24 ಗಂಟೆಗಳಲ್ಲಿ ಎಷ್ಟು ಕೋಟಿ ವೀಕ್ಷಣೆ​ ಪಡೆಯಿತು 'ಜೇಮ್ಸ್' ಟೀಸರ್?

Published on
''ನನಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿ ಅಭ್ಯಾಸ''. ಇದು 'ಜೇಮ್ಸ್' ಟೀಸರ್‌ನ ಖಡಕ್ ಡೈಲಾಗ್. ಈ ಡೈಲಾಗ್ ಟೀಸರ್‌ನಲ್ಲಿ ನೋಡಿದ್ಮೇಲೆ ನಿಜಕ್ಕೂ ದಾಖಲೆಗಳೆಲ್ಲಾ ಪುಡಿ ಪುಡಿಯಾಗಿವೆ ಅನಿಸುತ್ತೆ. ಕೇವಲ 24 ಗಂಟೆಗಳಲ್ಲಿ ಅಪ್ಪು ಅವರ ಕೊನೆಯ 'ಜೇಮ್ಸ್' ಸಿನಿಮಾದ ಟೀಸರ್ ನಿಜಕ್ಕೂ ಎರಡು ಹೊಸ ದಾಖಲೆಗಳನ್ನು ಬರೆದಿದೆ. ಒಂದೇ ದಿನದೊಳಗೆ 'ಜೇಮ್ಸ್'ಗೆ 1 ಕೋಟ ಅಂದರೆ 10 ಮಿಲಿಯನ್ ವೀಕ್ಷಣೆ ಸಿಕ್ಕಿದೆ. ಇದಲ್ಲದೇ, 530k ಲೈಕ್ಸ್ ಅನ್ನು ಈ ಟೀಸರ್ ಗಿಟ್ಟಿಸಿಕೊಂಡಿದೆ. ಅಂದಹಾಗೆ, ಕನ್ನಡದ ಯಾವುದೇ ಸಿನಿಮಾಗಳ ಟೀಸರ್‌ಗೂ ಈ ಮಟ್ಟಿಗಿನ ರೆಸ್ಪಾನ್ಸ್ ಇಲ್ಲಿಯವರೆಗೆ ಸಿಕ್ಕಿರಲಿಲ್ಲ.
ಹೀಗೆ ಮುನ್ನುಗುತ್ತಿರುವ ಈ ಟೀಸರ್ ಒಂದೊಂದು ಹಳೆಯ ದಾಖಲೆಗಳನ್ನು ಅಳಿಸಿ ಹಾಕುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚೇತನ್ ಕುಮಾರ್ ಅವರ ನಿರ್ದೇಶನದ ಈ 'ಜೇಮ್ಸ್' ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತೆ. ಹೀಗಾಗಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಸಿನಿಮಾದ ಟೀಸರ್ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಇನ್ನೇನು, ಈ ದಾಖಲೆಗಳ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಭಾಕಿ ಇದೆ, ಅಷ್ಟೇ. ಸಿನಿಮಾದಲ್ಲಿ ನಟ ಶ್ರೀಕಾಂತ್ ಮತ್ತು ನಾಯಕಿ ನಟಿ ಪ್ರಿಯಾ ಆನಂದ್ ಅವರ ಪಾತ್ರಗಳು ಎಲ್ಲರ ಗಮನ ಸೆಳೆಯಲಿವೆ.
'ಜೇಮ್ಸ್' ಟೀಸರ್​ಗೆ ಬೇರೆ ಭಾಷೆಗಳಲ್ಲೂ ನಿಜಕ್ಕೂ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಹೌದು, 24 ಗಂಟೆಯೊಳಗೆ 'ಜೇಮ್ಸ್'ನ ತೆಲುಗು ಟೀಸರ್‌ಗೆ 2.1 ಮಿಲಿಯನ್ ವೀವ್ಸ್ ಸಿಕ್ಕಿದೆ. 'ಜೇಮ್ಸ್' ಚಿತ್ರದ ತಮಿಳು ಟೀಸರ್​ಗೆ 1.6 ಮಿಲಿಯನ್ ವೀಕ್ಷಣೆ ಸಿಕ್ಕಿದೆ. ಇನ್ನು 'ಜೇಮ್ಸ್' ಹಿಂದಿ ಟೀಸರ್‌ಗೆ 1.7 ಮಿಲಿಯನ್ ಆದರೆ, ಮತ್ತೊಂದೆಡೆ 'ಜೇಮ್ಸ್' ಮಲಯಾಳಂ ಟೀಸರ್​ 1.7 ಮಿಲಿಯನ್ ವೀವ್ಸ್ ಗಿಟ್ಟಿಸಿಕೊಂಡಿದೆ. ಇನ್ನು, ಈ ಟೀಸರ್​ಗಳಿಗೆ ಸಾವಿರ ಸಾವಿರ ಕಾಮೆಂಟ್​ಗಳು ಹರಿದು ಬಂದಿವೆ. ಚಿತ್ರದ ಟೀಸರ್​ಗೆ ರೆಸ್ಪಾನ್ಸ್ ಈ ರೇಂಜ್​ಗೆ ಇದ್ದರೆ, ಸಿನಿಮಾ ಬಿಡುಗಡೆಯಾದರೆ ಅಭಿಮಾನಿಗಳ ಅಬ್ಬರ ಯಾವ ರೇಂಜ್​ಗೆ ಇರಬಹುದು ಎಂಬುದು ಈಗ ಎಲ್ಲರ ಕುತೂಹಲವಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net